

ಕಂಪ್ಲಿ: ರಾಜ್ಯದಲ್ಲಿ ಕರೊನಾ ಸಾವು-ನೋವುಗಳಿಗೆ ಕಾಂಗ್ರೆಸ್ ನಾಯಕರ ಧೋರಣೆಗಳೇ ಕಾರಣ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆಪಾದಿಸಿದ್ದಾರೆ. ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇಂಥ ಸಂಕಷ್ಟದ ಸಮಯದಲ್ಲಿ ಹೊಣೆಗಾರಿಕೆ ಮರೆತಿರುವ ಡಿ.ಕೆ.ಶಿವಕುಮಾರ ಮತ್ತು ಸಿದ್ದರಾಮಯ್ಯರು ಅಧಿಕಾರ ಚುಕ್ಕಾಣಿ ಹಿಡಿಯುವ ಆಸೆಯಿಂದ ಗೊಂದಲ ಸೃಷ್ಟಿಸಿ ಜನತೆ ಲಸಿಕೆ ಪಡೆಯದಂತೆ ಮಾಡಿದರು. ಏನೇನೋ ಹೇಳಿ ಜನರಲ್ಲಿ ಭಯ ಹುಟ್ಟಿಸಿ, ಲಸಿಕೆ ಹಾಕಿಸಿಕೊಳ್ಳದಂತೆ ಮಾಡಿ ಸಾವು ಹೆಚ್ಚುವಂತೆ ಮಾಡಿದರು. ಈಗ ಸಾವಿನ ಮನೆಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಕರೊನಾ ಸಂಕಷ್ಟದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ರಾಜ್ಯ-ಕೇಂದ್ರಕ್ಕೆ ಸಲಹೆ, ಮಾರ್ಗದರ್ಶನ ನೀಡುವ ಮೂಲಕ ಆದರ್ಶರಾಗಿದ್ದಾರೆ. ವಿಪಕ್ಷಗಳು ಇವರಿಂದ ಪ್ರೇರಣೆ ಪಡೆದುಕೊಳ್ಳಬೇಕು ಎಂದರು.