ನಿತ್ಯ ಅಭ್ಯಾಸ ಮಾಡಿ ಉತ್ತಮ ಕ್ರೀಡಾಪಟುವಾಗಿ, ವಿದ್ಯಾರ್ಥಿಗಳಿಗೆ ಕಂಪ್ಲಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಕೆ.ಯರ‌್ರಿಸ್ವಾಮಿ ಸಲಹೆ

050922 Kampli Dasara Sports
ಕಂಪ್ಲಿ ತಾಲೂಕು ದಸರಾ ಕ್ರೀಡಾಕೂಟದಲ್ಲಿ ತಹಸೀಲ್ದಾರ್ ಗೌಸಿಯಾಬೇಗಂ ಚೆಂಡು ಎಸೆಯುವ ಮೂಲಕ ಥ್ರೋಬಾಲ್ ಪಂದ್ಯಕ್ಕೆ ಚಾಲನೆ ನೀಡಿದರು.
Published on

ಕಂಪ್ಲಿ: ನಿತ್ಯ ಅಭ್ಯಾಸ ಮಾಡುವ ಮೂಲಕ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಬೇಕು ಎಂದು ವಿದ್ಯಾರ್ಥಿಗಳಿಗೆ ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಕೆ.ಯರ‌್ರಿಸ್ವಾಮಿ ಸಲಹೆ ನೀಡಿದರು.

ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಬಳ್ಳಾರಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಪಂ ಏರ್ಪಡಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮಾತನಾಡಿದರು.

ಪ್ರಮುಖರಾದ ಬಿ.ಸಿದ್ದಪ್ಪ, ಮಾತನಾಡಿ, ದಸರಾ ಕ್ರೀಡಾಕೂಟದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿಲ್ಲ ಎಂದರೆ, ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿ, ಆಟೋಟಗಳ ಬಗ್ಗೆ ಅಧಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿದರು.

ದಸರಾ ಕ್ರೀಡಾಕೂಟದಲ್ಲಿ ಬಾಲಕರ ಖೋಖೋ 8ತಂಡ, ಕಬಡ್ಡಿ 15, ಬಾಲಕಿಯರು 2, ವಾಲಿಬಾಲ್ 12, ಥ್ರೋಬಾಲ್‌ನಲ್ಲಿ ತಲಾ 6 ಬಾಲಕ ಮತ್ತು ಬಾಲಕಿಯರ ತಂಡ, 100 ಮೀಟರ್ ಓಟದಲ್ಲಿ ಬಾಲಕರು 16, ಬಾಲಕಿಯರು 11, 200 ಮೀಟರ್ ಓಟದಲ್ಲಿ 19 ಬಾಲಕರು, 13 ಬಾಲಕಿಯರು, 400 ಮೀಟರ್ ಓಟದಲ್ಲಿ 18ಬಾಲಕರು, 11ಬಾಲಕಿಯರು, 800 ಮೀಟರ್ ಓಟದಲ್ಲಿ 24ಬಾಲಕರು, 5 ಬಾಲಕಿಯರು, 5000 ಮೀಟರ ಓಟದಲ್ಲಿ 5ಬಾಲಕರು, ಉದ್ದಜಿಗಿತದಲ್ಲಿ 22ಬಾಲಕರು, 6 ಬಾಲಕಿಯರು, ಎತ್ತರ ಜಿಗಿತದಲ್ಲಿ 7ಬಾಲಕರು, ಡಿಸ್ಕಸ್ ಥ್ರೋನಲ್ಲಿ 6ಬಾಲಕಿಯರು, ಶಾಟ್‌ಪುಟ್‌ನಲ್ಲಿ 16ಬಾಲಕರು, 7ಬಾಲಕಿಯರು, ಜಾವಲೀನ್ ಥ್ರೋನಲ್ಲಿ 14 ಬಾಲಕರು 9 ಬಾಲಕಿಯರು, ರಿಲೇಯಲ್ಲಿ 2 ತಂಡಗಳು ಪಾಲ್ಗೊಂಡಿದ್ದವು.

ಪ್ರಮುಖರಾದ ಜಿ.ಜಿ.ಚಂದ್ರಣ್ಣ, ಟಿ.ಎಂ.ಬಸವರಾಜ್, ರಮೇಶ್ ಚಲವಾದಿ, ಗಣಚಾರಿ ಕೊಟ್ರಪ್ಪ, ಜೆ.ಎಂ.ಆರ್.ಬಸವರಾಜ್, ದೈಹಿಕ ಶಿಕ್ಷಕರಾದ ಬೀರಲಿಂಗ, ರಮೇಶ್ ಎನ್.ಶಿವಪೂರ್, ಯು.ಅಶೋಕ್, ಕೆ.ಆರ್.ಅಶ್ವನಿ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net