ಕರೊನಾ ನಿರ್ಮೂಲನೆಗೆ ಕಂಪ್ಲಿಯ ದೇವಲಾಪುರದ ಗುಡಿಗಳಲ್ಲಿ ವಿಶೇಷ ಪೂಜೆ

12042020 Kampli Temple Special worship
Published on

ಕಂಪ್ಲಿ: ಕರೊನಾ ನಿರ್ಮೂಲನೆಗೆ ಸಂಕಲ್ಪಿಸಿ ಲೋಕಕಲ್ಯಾಣಾರ್ಥ ಗ್ರಾಮದ ಗುಡಿ, ಮಠಗಳಲ್ಲಿ ಪೂಜೆ ಸಲ್ಲಿಸಲಾಯಿತು ಎಂದು ದೇವಲಾಪುರ ಗ್ರಾಪಂ ಅಧ್ಯಕ್ಷ ಹಾಗೂ ಕರೊನಾ ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷ ಗೌಡ್ರು ಸುರೇಶಗೌಡ ಹೇಳಿದರು.

ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಭಾನುವಾರ ಗ್ರಾಮದ 35ಕ್ಕೂ ಹೆಚ್ಚು ದೇವಸ್ಥಾನ, ಮಠಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗ್ರಾಮದ ಮನೆ ಮನೆಗೂ ಬಾಳೆಹಣ್ಣು ವಿತರಿಸಿ, ಕರೊನಾ ಮುಂಜಾಗ್ರತಾ ಕ್ರಮಗಳ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ ಮಾತನಾಡಿದರು. ಕರೊನಾ ನಿಯಂತ್ರಣಕ್ಕಾಗಿ ದೇವರ ಮೊರೆ ಹೋಗಿದ್ದು, ಕರೊನಾ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ರೂಪಿಸಲು ಸಂಕಲ್ಪಿಸಲಾಗಿದೆ. ಅಲ್ಲದೆ, ರಾಮಸಾಗರದ ಬಾಳೆ ತೋಟಗಳಲ್ಲಿ ಗೊನೆಯಲ್ಲಿಯೇ ಹಣ್ಣಾಗುತ್ತಿದ್ದು, ಬೆಳೆಗಾರರಿಗೆ ನೆರವಾಗುವ ಹಿನ್ನೆಲೆಯಲ್ಲಿ ರೈತರಿಂದ ಬಾಳೆ ಖರೀದಿಸಿ ಗ್ರಾಮದ 1500 ಮನೆಗಳಿಗೂ ವಿತರಿಸಲಾಗಿದೆ ಎಂದು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷ ದನಕಾಯೋ ವೀರೇಶ್, ಸದಸ್ಯರಾದ ಉಮೇಶಗೌಡ, ರಾಮನಗೌಡ, ಕೋರಿ ಬಸವರಾಜ, ಎಸ್‌ಡಿಎಂಸಿ ಅಧ್ಯಕ್ಷ ಗೌಡ್ರು ಷಣ್ಮುಖಪ್ಪ, ಕಿರಿಯ ಆರೋಗ್ಯ ಸಹಾಯಕಿ ಮಂಜುಳಾ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net