ಕೋನೋಕಾರ್ಪಸ್ ಮರಗಳ ತೆರವು

Kampli jcb
ಕಂಪ್ಲಿ ಎಪಿಎಂಸಿ ಆವರಣದಲ್ಲಿ ಬೆಳೆಸಿದ್ದ ಕೋನೋಕಾರ್ಪಸ್ ಮರಗಳನ್ನು ತೆರವುಗೊಳಿಸಲಾಯಿತು.
Published on

ಕಂಪ್ಲಿ: ಇಲ್ಲಿನ ಎಪಿಎಂಸಿ ಆವರಣದಲ್ಲಿನ ಸೈಟ್ ನಂಬರ್ 29ರ ಮುಂಭಾಗದಲ್ಲಿ ಬೆಳೆಸಿದ್ದ ಕೋನೋಕಾರ್ಪಸ್(ದುಬೈ ಟ್ರೀ), ಲಿಂಕ್ ರಸ್ತೆಯಲ್ಲಿನ ತಾತ್ಕಾಲಿಕ ಶೆಡ್ ಹಾಗೂ ಚರಂಡಿ ಅತಿಕ್ರಮಿಸಿ ನಿರ್ಮಿಸಿದ ಕಟ್ಟಡಗಳನ್ನು ತೆರವುಗೊಳಿಸಲಾಯಿತು.

ಎಪಿಎಂಸಿ ಅಧ್ಯಕ್ಷ ಗೌಡ್ರು ಅಂಜಿನಪ್ಪ ಮಾತನಾಡಿ, ಪರಿಸರ ಮತ್ತು ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ 32 ಕೋನೋಕಾರ್ಪಸ್, ಒಂದು ಬೇವಿನ ಮರವನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ.

ಲಿಂಕ್‌ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಜಿಂಕ್‌ಶೀಟ್ ತಾತ್ಕಾಲಿಕ ಶೆಡ್, ಚರಂಡಿ ಅತಿಕ್ರಮಿಸಿ ನಿರ್ಮಿಸಿದ ಹತ್ತು ಕಟ್ಟಡಗಳನ್ನು ತೆರವುಗೊಳಿಸಲಾಗಿದೆ ಎಂದರು.

ಎಪಿಎಂಸಿ ಉಪಾಧ್ಯಕ್ಷ ಶರಣಬಸವ, ಸದಸ್ಯರಾದ ಗುರುಮೂರ್ತಿ, ಹಬೀಬ್ ರೆಹಮಾನ್, ಟಿ.ಸುರೇಶರೆಡ್ಡಿ, ಜಿ.ದೊಡ್ಡಯರ‌್ರಿಸ್ವಾಮಿ, ಸುರೇಶಬಾಬು, ಎಚ್.ಕೃಷ್ಣ, ಪಂಪಾಪತಿ, ಕಾಸಿಂಸಾಬ್, ಚನ್ನಬಸಪ್ಪ, ಎಚ್.ತಿಪ್ಪಯ್ಯ, ಯಲ್ಲವ್ವ, ಎಪಿಎಂಸಿ ಕಾರ್ಯದರ್ಶಿ ರಾಜು ಕೊಂಚಿಗೇರಿ, ಮೇಲ್ವಿಚಾರಕ ಸುಕುರ್‌ಸ್ವಾಮಿ ಇತರರಿದ್ದರು. ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net