ಕಾಂಗ್ರೆಸ್ ಟಿಕೆಟ್ ಮುಸ್ಲಿಮರಿಗೆ ಸಿಗಲಿ - ಪುರಸಭೆ ಸದಸ್ಯ ಕೆ.ಎಸ್.ಚಾಂದ್‌ಬಾಷಾ

060123 Kampli Muslim Leaders Meeting
ಕಂಪ್ಲಿಯಲ್ಲಿ ಏರ್ಪಡಿಸಿದ್ದ ಮುಸ್ಲಿಂ ಸಮುದಾಯ ಸಂಘಟನಾ ಸಭೆಯಲ್ಲಿ ಪುರಸಭೆ ಸದಸ್ಯ ಕೆ.ಎಸ್.ಚಾಂದ್‌ಬಾಷಾ ಮಾತನಾಡಿದರು.
Published on

ಕಂಪ್ಲಿ: ಆರಂಭದಿಂದಲೂ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತ ಬಂದಿದ್ದು, ಹೊಸಪೇಟೆ ವಿಧಾನಸಭಾ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾತಿಗಿದ್ದರಿಮದ ಮುಸ್ಲಿಂ ಸಮುದಾಯದ ಅರ್ಹರಿಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ಪುರಸಭೆ ಸದಸ್ಯ ಕೆ.ಎಸ್.ಚಾಂದ್‌ಬಾಷಾ ಒತ್ತಾಯಿಸಿದರು.

ಪಟ್ಟಣದಲ್ಲಿ ಏರ್ಪಡಿಸಿದ್ದ ಮುಸ್ಲಿಂ ಸಮುದಾಯ ಮುಖಂಡರ ಸಂಘಟನಾ ಸಭೆಯಲ್ಲಿ ಮಾತನಾಡಿದರು. ಸಮುದಾಯದ ಮನವಿಯಲ್ಲಿ ಪಕ್ಷದ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು. ತಾತ್ಸಾರ ಮಾಡಿದಲ್ಲಿ ಚುನಾವಣೆ ವೇಳೆ ಸಮುದಾಯದ ಮುಖಂಡರು ಪ್ರತ್ಯೇಕ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖಂಡ ಅಕ್ಕಿಜಿಲಾನ್ ಮಾತನಾಡಿದರು. ಪುರಸಭೆ ಸದಸ್ಯ ಎಂ.ಲಡ್ಡು ಹೊನ್ನೂರವಲಿ, ಮುಖಂಡರಾದ ಎಂ.ಮಸ್ತಾನ್, ಖಾಜಾ, ರಿಯಾಜ್, ಬಿ.ನಬೀ, ಎನ್.ಯುನೀಸ್, ಅಬ್ದುಲ್, ರಿಯಾಜ್ ಭಾಷಾ, ಫಯಾಜ್, ಎನ್.ಯುಸುಫ್, ಎಂ.ಗೌಸ್, ನೂರ್, ಹೊನ್ನೂರವಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net