ಸಮ್ಮೇಳನದ ಪೂರ್ವಭಾವಿ ಸಭೆ 9ರಂದು

030123 Kampli Kasapa Meeting
ಕಂಪ್ಲಿಯಲ್ಲಿ ಜರುಗಿದ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಮಾತನಾಡಿದರು.
Published on

ಕಂಪ್ಲಿ: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕು ಸಮ್ಮೇಳನ ಹಮ್ಮಿಕೊಳ್ಳುವ ಬಗ್ಗೆ ಜ.9ರಂದು ಬೆಳಿಗ್ಗೆ 11.30ಕ್ಕೆ ಸಾಂಗತ್ರಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಹೇಳಿದರು.

ಗಂಗಾಸಂಕೀರ್ಣದಲ್ಲಿ ಆಯೋಜಿಸಿದ್ದ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ತಾಲೂಕು ಸಮ್ಮೇಳನದ ದಿನಾಂಕ, ಸ್ಥಳ, ರೂಪು-ರೇಷೆ ಕುರಿತು ನಿರ್ಧರಿಸುವ ಕಾರಣ ಪೂರ್ವಭಾವಿ ಸಭೆ ಕರೆಯಲಾಗಿದ್ದು, ಕಸಾಪ ಸದಸ್ಯರು, ತಾಲೂಕಿನ ಪ್ರಗತಿಪರ ಸಂಘಟನೆಗಳ ಪ್ರಮುಖರು, ರಾಜಕೀಯ ಪ್ರತಿನಿಧಿಗಳು, ಹಿರಿಯ ನಾಗರಿಕರು ಪಾಲ್ಗೊಳ್ಳಬೇಕು ಎಂದರು.

ಪ್ರಮುಖರಾದ ಎಲಿಗಾರ ವೆಂಕಟರೆಡ್ಡಿ, ಡಾ.ಎ.ಸಿ.ದಾನಪ್ಪ, ಸಿ.ವೆಂಕಟೇಶ್, ಎಸ್.ವಿಜಯಲಕ್ಷ್ಮೀ, ವೀರಮ್ಮ ನಾಗರಾಜ್, ಅಶೋಕ್ ಕುಕನೂರು, ಎಂ.ಎಸ್.ವಿರುಪಾಕ್ಷಯ್ಯಸ್ವಾಮಿ, ಅಗಳಿ ಪಂಪಾಪತಿ, ಬಿ.ಸುನೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net