

ಕಂಪ್ಲಿ: ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಗ್ರಾಪಂಯಿಂದ ಸಂಪೂರ್ಣತಾ ಅಭಿಯಾನ ಶುಕ್ರವಾರ ನಡೆಯಿತು.
ಟಿಎಚ್‌ಒ ಡಾ.ಜಿ.ಅರುಣ್ ಮಾತನಾಡಿ, ಕಂಪ್ಲಿ ಮಹತ್ವಾಕಾಂಕ್ಷಿ ತಾಲೂಕಾಗಿ ಆಯ್ಕೆಯಾಗಿದ್ದು, ಕೆಲವು ಸೂಚ್ಯಂಕಗಳಲ್ಲಿ ಪ್ರಗತಿ ಸಾಧಿಸಬೇಕಿದೆ. ಮೂರು ತಿಂಗಳಲ್ಲಿ ಸಂಪೂರ್ಣತಾ ಅಭಿಯಾದಡಿ ಅಭಿವೃದ್ಧಿ ಹೊಂದಲು ಪ್ರತಿ ಗ್ರಾಪಂನಲ್ಲಿ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ತಾಪಂ ಎಡಿ ಕೆ.ಎಸ್.ಮಲ್ಲನಗೌಡ, ಕೃಷಿ ಅಧಿಕಾರಿ ಶ್ರೀಧರ, ಗ್ರಾಪಂ ಅಧ್ಯಕ್ಷೆ ಎಂ.ಆಶಾ, ಉಪಾಧ್ಯಕ್ಷ ಆರ್.ಎಂ.ರಾಮಯ್ಯ, ಪಿಡಿಒ ಹನುಮಂತಪ್ಪ, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಅರುಣಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಲತೀಫಾಬೇಗಂ, ಬಿಎಚ್‌ಒ ಶೋಭಾ, ಮಹತ್ವಾಕಾಂಕ್ಷಿ ತಾಲೂಕು ಸಂಯೋಜಕ ಬಸವನಗೌಡ, ಆರೋಗ್ಯ ಸಿಬ್ಬಂದಿ ರೇಖಾ, ಸುನೀತಾ, ಪ್ರಮುಖ ಕರೆಂಟ್ ಗೋಪಾಲಪ್ಪ ಇತರಿದ್ದರು.