ಸ್ವಚ್ಛತೆಯಿಂದ ರೋಗಗಳು ದೂರ

290422 Kampli Awareness Program on Various Diseases
ಕಂಪ್ಲಿಯ ಗೋಪಾಲಪುರದಲ್ಲಿ ವಿವಿಧ ರೋಗಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
Published on

ಕಂಪ್ಲಿ: ಸ್ವಚ್ಛತೆಯಿಂದ ರೋಗಗಳು ದೂರವಾಗುತ್ತವೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ ಹೇಳಿದರು.

ಪುರಸಭೆಯ ವ್ಯಾಪ್ತಿಯ 7ನೇ ವಾರ್ಡ್‌ನ ಗೋಪಾಲಪುರದಲ್ಲಿ ಶುಕ್ರವಾರ ಲಾರ್ವಾ ಸರ್ವೇ ಅಡ್ಡ ಪರಿಶೀಲನೆ ಮತ್ತು ಡೆಂಘೆ, ಚಿಕೂನ್‌ಗುನ್ಯಾ ಮತ್ತು ಮಲೇರಿಯಾ ರೋಗ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ ತಿಂಗಳಲ್ಲಿ ಡೆಂಘೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲಾರ್ವಾ ಸಮೀಕ್ಷೆಯ ಅಡ್ಡ ಪರಿಶೀಲನೆ ಮಾಡಲಾಗುತ್ತಿದೆ. ಮನೆ ಒಳ ಮತ್ತು ಸುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಂಡಲ್ಲಿ ಸೊಳ್ಳೆ, ಕೀಟ, ನೊಣಗಳನ್ನು ಹತೋಟಿಯಲ್ಲಿಡುವ ಮೂಲಕ ನಾನಾ ರೋಗಗಳನ್ನು ತಡೆಯಲು ಸಾಧ್ಯವಿದೆ ಎಂದರು.

ಇದೇ ವೆಳೆ ಮನೆ ಮನೆಗೆ ತೆರಳಿ ರೋಗಗಳ ಕುರಿತು ಜಾಗೃತಿ ಮೂಡಿಸಲಾಯಿತು. ಆಶಾ ಕಾರ್ಯಕರ್ತೆಯರಾದ ವಿಜಯಲಕ್ಷ್ಮೀ, ಟಿ.ಲಕ್ಷ್ಮೀ, ಖಾಸೀಂಬೀ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net