ಚಿನ್ನಾಪುರ ಗುಡ್ಡಕ್ಕೆ ಅಗ್ನಿ

Kampli karigudda fire
ಕಂಪ್ಲಿಯ ಚಿನ್ನಾಪುರದ ಕರಿಗುಡ್ಡಕ್ಕೆ ಬಿದ್ದ ಬೆಂಕಿ ನಂದಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ.
Published on

ಕಂಪ್ಲಿ: ತಾಲೂಕಿನ ಚಿನ್ನಾಪುರ ಗ್ರಾಮದ ಕರಿಗುಡ್ಡಕ್ಕೆ ಸೋಮವಾರ ಸಂಜೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಹೊಸಪೇಟೆ ಪ್ರಾದೇಶಿಕ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಬೆಳಗಿನ ಜಾವ ನಂದಿಸಿದ್ದಾರೆ.

ಪ್ರಾದೇಶಿಕ ಅರಣ್ಯ ವಲಯದ ಆರ್‌ಎಫ್‌ಒ ಭರತ್‌ರಾಜ್ ಪ್ರತಿಕ್ರಿಯಿಸಿ, ಸೋಮವಾರ ಸಂಜೆ 7 ಗಂಟೆಯಿಂದ ಮಂಗಳವಾರ ನಸುಕಿನ ಜಾವ 4ಗಂಟೆವರೆಗೆ ಫೈರ್ ಡೋಸರ್ ಯಂತ್ರದ ಮೂಲಕ ಬೆಂಕಿ ನಂದಿಸಲಾಗಿದೆ. ಯಾವುದೇ ಜೀವಹಾನಿ ಆಗಿಲ್ಲ. ಬೆಂಕಿ ಬಿದ್ದ ಭಾಗ ಕಾಯ್ದಿರಿಸಿದ ಅರಣ್ಯವಾಗಿದ್ದು, ಯಾರೋ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆ ಇದೆ. ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಅರಣ್ಯ ಇಲಾಖೆಯವರು ಸಸಿ ನೆಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಬೆಂಕಿ ತಡೆ ರೇಖೆ ನಿರ್ಮಿಸಿಕೊಳ್ಳಬೇಕಿತ್ತು. ಬೆಂಕಿಯಿಂದ ತೀವ್ರ ಹಾನಿಯಾಗುವುದನ್ನು ಸಕಾಲಕ್ಕೆ ತಡೆಯಲಾಗಿದೆ ಎಂದರು.

ಕರಡಿಧಾಮ ವಲಯ ಅಧಿಕಾರಿ ಬಸವರಾಜ, ಬೀಟ್ ಫಾರೆಸ್ಟರ್ ರಾಘವೇಂದ್ರ, ಅರಣ್ಯ ವೀಕ್ಷಕ ನಾಗರಾಜ, ಡಿಆರ್‌ಎಫ್‌ಒಗಳಾದ ವೀರೇಶ, ಕೊಟ್ರೇಶ್ ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net