

ಕಂಪ್ಲಿ: ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಚಿನ್ನಾಪುರದ ಸಹಿಪ್ರಾ ಶಾಲೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಚಿನ್ನಾಪುರ ಮತ್ತು ಗೋನಾಳ್ ಗ್ರಾಮಗಳ ಸಹಿಪ್ರಾ ಶಾಲೆಗಳಲ್ಲಿ ಕೆಕೆಆರ್‌ಡಿಬಿಯಡಿಯಲ್ಲಿ 44.60 ಲಕ್ಷ ರೂ. ಕೊಠಡಿ, ಶೌಚಗೃಹ ನಿರ್ಮಾಣಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಶಾಲೆ ರಸ್ತೆಗಿದ್ದು ಮಕ್ಕಳ ಸುರಕ್ಷತೆಗಾಗಿ ಶಾಲೆ ಸ್ಥಳಾಂತರಿಸಲಾಗುವುದು ಎಂದರು.
ಇದನ್ನೂ ಓದಿ: ದಸರೆಯಲ್ಲಿ ಸುರಕ್ಷತೆಗೆ ಆದ್ಯತೆ
ಚಿನ್ನಾಪುರ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಭೂಮಿ ಒದಗಿಸಿ ಅಭಿವೃದ್ಧಿಗೊಳಿಸುವಂತೆ, ಸಹಿಪ್ರಾ ಶಾಲೆಯನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಶಾಸಕರನ್ನು ಒತ್ತಾಯಿಸಿದರು.
ಗ್ರಾಪಂ ಅಧ್ಯಕ್ಷೆ ನಾಗಮ್ಮ ನಾಗರಾಜ, ಮುಖ್ಯಶಿಕ್ಷಕಿ ಉಷಾರಾಣಿ, ಎಸ್‌ಡಿಎಂಸಿ ಅಧ್ಯಕ್ಷ ರಮೇಶಬಾಬು, ಪ್ರಮುಖರಾದ ನೇಣ್ಕಿ ಗಿರೀಶ, ಕುಶಾಲಪ್ಪ, ಪಂಪಣ್ಣ, ಕೊಂಡಪ್ಪ, ತಿಮ್ಮಪ್ಪ, ಎಚ್.ಕುಮಾರ್, ಸತ್ಯನಾರಾಯಣ, ಬಸಪ್ಪ, ಹನುಮೇಶಪ್ಪ, ಹುಸೇನ್‌ಸಾಬ್, ಹೊಸಕೋಟೆ ಜಗದೀಶ, ರಾಜಪ್ಪ, ಸಿ.ಆರ್.ಹನುಮಂತ, ಕೆ.ಷಣ್ಮುಖ ಇತರರಿದ್ದರು.