

ಕಂಪ್ಲಿ: ತಾಲೂಕಿನ ಮಾವಿನಹಳ್ಳಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಿದ್ಧೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್‌ನಿಂದ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ದೊಡ್ಡಬಸಪ್ಪ ಮಾತನಾಡಿ, ಬಾಲ್ಯದಲ್ಲಿಯೇ ಮಕ್ಕಳಲ್ಲಿ ಸಾಂಸ್ಕೃತಿಕ, ರಂಗಕಲೆ ಪ್ರೇರಣೆಗೊಳಿಸಬೇಕು. ಬಯಲಾಟ ಉತ್ತರ ಕರ್ನಾಟಕದ ಗಂಡುಮೆಟ್ಟಿನ ಕಲೆಯಾಗಿದ್ದು ಮಕ್ಕಳಿಗೆ ಕಲಿಸಿಕೊಡುವಲ್ಲಿ ಕಲಾವಿದರು ಮುಂದಾಗಬೇಕು ಎಂದರು. ಕಲಾವಿದ ಡಿ.ಹುಲಿಯಪ್ಪ ಪ್ರದರ್ಶಿಸಿದ ಏಕವ್ಯಕ್ತಿ ಬಯಲಾಟ ಪ್ರೇಕ್ಷಕರ ಮನಸೂರೆಗೊಂಡಿತು.
ಶಾನವಾಸಪುರದ ವಿನಯಪ್ರಸಾದ್ ಮತ್ತು ತಂಡದವರು ಪ್ರಸ್ತುತ ಪಡಿಸಿದ ಜನಪದ ಸಂಗೀತ, ಪುರುಷೋತ್ತಮ ತಂಡದ ತತ್ವಪದಗಳು ಶೋತೃಗಳನ್ನು ರಂಜಿಸಿತು. ಬಿ.ದೊಡ್ಡಬಸಪ್ಪ ತಂಡದ ವಾದ್ಯ ಸಂಗೀತ, ಯೋಗೇಶ್ ತಂಡದ ಸುಗಮ ಸಂಗೀತ ಕಾರ್ಯಕ್ರಮ ಆಕರ್ಷಿಸಿದವು. ಎಚ್.ಲೋಕರಾಜ ತಂಡ ಪ್ರದರ್ಶಿಸಿದ ಸೋರುತಿಹುದು ಸಂಬಂಧ ನಾಟಕದಲ್ಲಿ ಕಲಾವಿದರು ಮನೋಜ್ಞವಾಗಿ ಅಭಿನಯ ಗಮನ ಸೆಳೆಯಿತು.
ಮುಖ್ಯಶಿಕ್ಷಕರಾದ ಎಚ್.ಜಡೆಪ್ಪ, ಎಚ್.ನಾಗರಾಜ, ಎಸ್.ಚಂದ್ರಪ್ಪ, ಟ್ರಸ್ಟ್ ಅಧ್ಯಕ್ಷ ಬಿ.ಗುರುಮಹಾಂತೇಶ, ಕಾರ್ಯದರ್ಶಿ ಕುರುಬರ ಹೇಮೇಶ್ವರ, ಕಲಾವಿದರಾದ ಕೆ.ವೀರೇಶ, ರಘು, ಕರಿಬಸಪ್ಪ, ಕೆ.ಎರ‌್ರಿಸ್ವಾಮಿ, ದೊಡ್ಡಬಸಪ್ಪ, ರಾಮಲಿ, ಪಂಪಾಪತಿ, ತಿಮ್ಮಪ್ಪ, ಉಮೇಶಪ್ಪ, ಬಿ.ಕೆ.ಸಿದ್ದಪ್ಪ ಇತರರಿದ್ದರು.