ಸ್ವಚ್ಛತೆಯಿಂದ ರೋಗಗಳಿಂದ ವಿಮುಖ

Untitled design
Published on

ಕಂಪ್ಲಿ: ತಾಲೂಕಿನ ಚಿಕ್ಕಜಾಯಿಗನೂರು ಗ್ರಾಮದ ಈಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಅಡಿಯಲ್ಲಿ ಯುವಜನ ಹಾಗೂ ಸಾಂಸ್ಕೃತಿಕ ಕಲಾತಂಡದಿಂದ ಜನತೆಯಲ್ಲಿ ಸ್ವಚ್ಛತೆ ಅರಿವು ಬೀದಿ ನಾಟಕ ಪ್ರದರ್ಶನಗೊಂಡಿತು.

ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿ ತಾಲೂಕು ಸಂಚಾಲಕ ಜಿ.ಅಮರೇಗೌಡ ಮಾತನಾಡಿ, ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವುದರಿಂದ ನಾನಾ ರೋಗಗಳಿಂದ ವಿಮುಖರಾಗಲು ಸಾಧ್ಯ. ಗ್ರಾಮಸ್ಥರು ವೈಯಕ್ತಿಕ ಮತ್ತು ಸಮುದಾಯಿಕ ಸ್ವಚ್ಛತೆ ಕಾಪಾಡುವಲ್ಲಿ ಮುಂದಾಗಬೇಕಿದೆ ಎಂದರು.

ಹಂಪಾದೇವನಹಳ್ಳಿ ಗ್ರಾಪಂ.ಅಧ್ಯಕ್ಷೆ ಕವಿತಾ ಪಂಪನಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳ ಶಿಕ್ಷಣ ಮಹತ್ವ, ಆರೋಗ್ಯ, ಸ್ವಚ್ಛತೆ, ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವದ ಪ್ರಾಮುಖ್ಯತೆ, ಶೌಚಗೃಹ ಬಳಕೆ, ನೀರಿನ ಸದ್ಬಳಕೆ ಸೇರಿ ನಾನಾ ವಿಚಾರಗಳ ಕುರಿತು ಕಲಾವಿದರು ಬೀದಿ ನಾಟಕ ಮೂಲಕ ಪ್ರಸ್ತುತಪಡಿಸಿದರು. ಮುಖ್ಯಶಿಕ್ಷಕ ಮಲ್ಲಿಕಾರ್ಜುನ, ವಲಯ ಮೇಲ್ವಿಚಾರಕ ಮಂಜುನಾಥ, ರೇಖಾ, ಸೇವಾ ಪ್ರತಿನಿಧಿ ಸಂಗೀತ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net