ಆರೋಗ್ಯ ಪದಾರ್ಥಗಳನ್ನು ಉತ್ಪಾದಿಸಿ

Untitled design(16)
ಕಂಪ್ಲಿಯ ಡಿಎಟಿಸಿಯಲ್ಲಿ ಏರ್ಪಡಿಸಿದ್ದ ವಿಶ್ವ ಆಹಾರ ದಿನಾಚರಣೆ, ತರಬೇತಿ ಕಾರ್ಯಕ್ರಮಕ್ಕೆ ಗಂಗಾವತಿ ಕೃಷಿ ಕಾಲೇಜಿನ ವಿಶೇಷಾಧಿಕಾರಿ ಡಾ.ಎಂಜೇರಪ್ಪ ಚಾಲನೆ ನೀಡಿದರು. ಪ್ರಮುಖರಾದ ವಿದ್ಯಾವತಿ ಎಸ್.ಹೊಸಮನಿ, ಏಸುಬಾಬು ರೈತ ಮಹಿಳೆಯರಿದ್ದರು.
Published on

ಕಂಪ್ಲಿ: ರಾಸಾಯನಿಕ ಮುಕ್ತ ಆರೋಗ್ಯಪೂರ್ಣ ಆಹಾರ ಪದಾರ್ಥಗಳನ್ನು ಉತ್ಪಾದಿಸುವಲ್ಲಿ ರೈತರು ಜಾಗೃತಿವಹಿಸಬೇಕಿದೆ ಎಂದು ಇಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರ(ಡಿಎಟಿಸಿ) ಸಹಾಯಕ ಕೃಷಿ ನಿರ್ದೇಶಕಿ ವಿದ್ಯಾವತಿ ಎಸ್.ಹೊಸಮನಿ ಹೇಳಿದರು.

ಇಲ್ಲಿನ ಡಿಎಟಿಸಿಯಲ್ಲಿ ವಿಶ್ವ ಆಹಾರ ದಿನಾಚರಣೆ, ರಾಷ್ಟ್ರೀಯ ವಿಕಾಸ ಯೋಜನೆಯಡಿ ಎಸ್‌ಟಿ ಮತ್ತು ಇತರ ರೈತರಿಗೆ ಮೂರು ದಿನಗಳ ಸಾಂಸ್ಥಿಕ ತರಬೇತಿ ಚಾಲನಾ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

ತರಬೇತಿಯಲ್ಲಿ ಸಾವಯವ ಕೃಷಿ, ನೈಸರ್ಗಿಕ ಕೃಷಿ, ಹೈನುಗಾರಿಕೆ, ತೋಟಗಾರಿಕೆ, ನ್ಯಾನೋ ಯೂರಿಯಾ, ಡಿಎಪಿ ಬಳಕೆ ಡ್ರೋಣ್ ಪ್ರಾತ್ಯಕ್ಷಿತೆ, ಯೂರಿಯಾ, ಕೆಮಿಕಲ್ ರಸಗೊಬ್ಬರ ಪರ್ಯಾಯವಾಗಿ ಇತರ ಗೊಬ್ಬರ ಬಳಕೆ, ಔಷಧ ಸಸ್ಯಗಳ ಮಹತ್ವ, ಜೇನು ಕೃಷಿ ತರಬೇತಿ, ಹಾವು ಕಡಿತದಿಂದ ರಕ್ಷಣೆ ಮೊದಲಾದ ವಿಷಯಗಳ ಕುರಿತು ತರಬೇತಿ ನೀಡಲಾಗುವುದು ಎಂದರು.

ಹಡಗಲಿಯ ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಚಂದ್ರಕಾಂತ ಎಂ.ಕಾಲ್ವಿಬಾವಿ ಮಾತನಾಡಿ, ಗುಣಮಟ್ಟದ ಕೃಷಿ ಉತ್ಪಾದನೆಗಾಗಿ ರಸಗೊಬ್ಬರ ಬಳಕೆ ಕಡಿತಗೊಳಿಸಿ ಸಾವಯವ ಗೊಬ್ಬರ, ಎರೆಹುಳು-ಕೊಟ್ಟಿಗೆ ಗೊಬ್ಬರ ಬಳಕೆ ಮಾಡಬೇಕಿದೆ ಎಂದರು. ಕಂಪ್ಲಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಪ್ರಹ್ಲಾದ ಆರ್.ಐಲಿ ಆರೋಗ್ಯ ತಪಾಸಿಸಿ ಆಯುರ್ವೇದ ಮಹತ್ವ ತಿಳಿಸಿಕೊಟ್ಟರು.

ಗಂಗಾವತಿ ಕೃಷಿ ಕಾಲೇಜಿನ ವಿಶೇಷಾಧಿಕಾರಿ, ಸಾವಯವ ಕೃಷಿಕ ಸಿ.ಬಸವರಾಜ, ಗಂಗಾವತಿಯ ಕೆವಿಕೆ ಗೃಹ ವಿಜ್ಞಾನಿ ಡಾ.ಕವಿತಾ ಉಳ್ಳಿಕಾಸಿ, ಕೃಷಿ ಅಧಿಕಾರಿಯಾದ ಏಸುಬಾಬು, ಶಿವಪ್ಪ ಬಾರಿಗಿಡದ, ಹಾವು ರಕ್ಷಕ ಕಮಲಾಪುರದ ಶಿಶ್ರನಿವಾಸ ಅಣ್ಣಿ ಚಕ್ರವತಿ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net