ವಿಜ್ಞಾನಿಗಳ ನಿರಂತರ ಪರಿಶ್ರಮವೇ ಕಾರಣ

CHANDRAYANA
ಚಂದ್ರಯಾನ-3ರ ಯಶಸ್ವಿ ಹಿನ್ನೆಲೆಯಲ್ಲಿಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ತಾಪಂ ಇಒ ಕೆ.ಎಸ್.ಮಲ್ಲನಗೌಡ ಮಾತನಾಡಿದರು. ಪ್ರಮುಖರಾದ ಸಂತೋಷ್ ಕೊಟ್ರಪ್ಪ ಸೋಗಿ, ಡಾ.ಅನ್ನಪೂರ್ಣ ಗುಡದೂರು, ಡಾ.ಬಿ.ಸುನೀಲ್, ಸಿದ್ದಲಿಂಗೇಶ್ವರ ಗದುಗಿನ, ಡಾ.ಮಹೇಶ ಇತರರಿದ್ದರು.
Published on

ಕಂಪ್ಲಿ: ಚಂದ್ರಯಾನ-3ರ ಯಶಸ್ವಿಗೆ ವಿಜ್ಞಾನಿಗಳ ನಿರಂತರ ಪರಿಶ್ರಮವೇ ಕಾರಣವಾಗಿದೆ ಎಂದು ತಾಪಂ ಎಡಿ ಕೆ.ಎಸ್.ಮಲ್ಲನಗೌಡ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಜೆಸಿಐ ಕಂಪ್ಲಿ ಸೋನಾ ಹಮ್ಮಿಕೊಂಡಿದ್ದ ಚಂದ್ರಯಾನ-3 ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಂದ್ರನ ಮೇಲಿನ ವಿಜಯದಿಂದಾಗಿ ಭಾರತ ಜಾಗತಿಕ ಮಟ್ಟದಲ್ಲಿ ವೈಜ್ಞಾನಿಕ, ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯ ಸಾಧನೆ ಮಾಡಿದಂತಾಗಿದೆ ಎಂದರು.

ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಸಂತೋಷ್ ಕೊಟ್ರಪ್ಪ ಸೋಗಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಚಂದ್ರಯಾನ-3ರ ರೂಪುರೇಷೆ, ಮಹತ್ವ ಕುರಿತು ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಡಾ.ಬಿ.ಸುನೀಲ್ ಇಸ್ರೋ ನಡೆದು ಬಂದ ಹಾದಿ ಕುರಿತು ಬಾಲಕಿಯರ ಸರ್ಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಸಿದ್ಧಲಿಂಗೇಶ್ವರ ಗದುಗಿನ ಉಪನ್ಯಾಸ ನೀಡಿದರು.

ಪ್ರಭಾರ ಪ್ರಾಚಾರ್ಯೆ ಡಾ.ಅನ್ನಪೂರ್ಣ ಗುಡದೂರು, ಸಹಾಯಕ ಪ್ರಾಧ್ಯಾಪಕರಾದ ಡಾ.ಕೆ.ಮಹೇಶ್, ಕಂಪ್ಲಿ ಜೆಸಿಐ ಮಹಿಳಾ ಘಟಕ ಅಧ್ಯಕ್ಷೆ ಅಮೃತಾ ಸಂತೋಷ್, ಪದಾಧಿಕಾರಿಗಳಾದ ಬಿ.ಎಚ್.ಎಂ.ಅಮರನಾಥಶಾಸ್ತ್ರಿ, ಜಿ.ಚಂದ್ರಶೇಖರಗೌಡ, ಕಟ್ಟೆ ನವೀನ್ ಕುಮಾರ್ ಇತರರಿದ್ದರು.

ವಿಜಯೋತ್ಸವ: ಚಂದ್ರಯಾನ-3 ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಮುಖಂಡರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಅಳ್ಳಳ್ಳಿ ವೀರೇಶ, ಪ್ರಮುಖರಾದ ಪಿ.ಬ್ರಹ್ಮಯ್ಯ, ಪುರುಷೋತ್ತಮ, ಬಿ.ಸಿದ್ದಪ್ಪ, ಡಾ.ವಿ.ಎಲ್.ಬಾಬು, ಜಿ.ಸುಧಾಕರ, ಕೊಡಿದಲರಾಜು, ಹೊನ್ನೂರಸಾಬ್ ಇತರರಿದ್ದರು.

ಪೂಜೆ: ಚಂದ್ರಯಾನ-3ರ ಯಶಸ್ವಿಗೆ ಪಟ್ಟಣದ ಶ್ರೀಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಅರ್ಚಕ ಕೆ.ಎಂ.ಚಂದ್ರಶೇರಸ್ವಾಮಿ ಪೌರೋಹಿತ್ಯದಲ್ಲಿ ಬುಧವಾರ ವಿಶೇಷ ಪೂಜೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net