ಅತಿಥಿ ಶಿಕ್ಷಕರಿಂದ ಪತ್ರ ಚಳವಳಿ

Kampli Guest Teachers
ಕಂಪ್ಲಿಯಲ್ಲಿ ಅತಿಥಿ ಶಿಕ್ಷಕರು ಮುಖ್ಯಮಂತ್ರಿ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬರೆದ ಪತ್ರಗಳನ್ನು ಪ್ರದರ್ಶಿಸಿದರು. ಪ್ರಮುಖರಾದ ಶಿವರುದ್ರ, ಎಸ್.ರಾಮಪ್ಪ, ಎಚ್.ಮಲ್ಲೇಶ್, ಕೆ.ಶೇಖಮ್ಮ, ಕುಸುಮಾ, ಮಮತಾ, ರಾಜೇಶ್ವರಿ ಇತರರಿದ್ದರು.
Published on

ಕಂಪ್ಲಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕು ಪ್ರಾಥಮಿಕ ಮತ್ತು ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಭಾನುವಾರ ಸಿಎಂ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಚಳವಳಿ ಆರಂಭಿಸಿದರು.

ಇಲ್ಲಿನ ಸತ್ಯನಾರಾಯಣಪೇಟೆ ಸರ್ಕಾರಿ ಹಿಪ್ರಾ ಶಾಲಾವರಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ತಾಲೂಕು ಅಧ್ಯಕ್ಷ ಕೆ.ಶಿವರುದ್ರ ಮಾತನಾಡಿ, ಅತಿಥಿ ಶಿಕ್ಷಕರ ನಾಲ್ಕು ತಿಂಗಳ ಗೌರವಧನ ಬಿಡುಗಡೆಗೊಂಡಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದ್ದು, ಕೂಡಲೇ ಗೌರವಧನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕೋಶಾಧ್ಯಕ್ಷ ಎಸ್.ರಾಮಪ್ಪ ಮಾತನಾಡಿ, 2012ರಿಂದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳ 43 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಅತಿಥಿ ಶಿಕ್ಷಕರ ಸೇವಾ ಹಿರಿತನ, ಅನುಭವ ಪರಿಗಣಿಸಿ ಅವರನ್ನೇ ನೇಮಕಗೊಳಿಸಬೇಕು. ಮಾಸಿಕ ವೇತನ 25 ಸಾವಿರ ರೂ. ನಿಗದಿಪಡಿಸಬೇಕು. ಪ್ರತಿ ತಿಂಗಳ ಮೊದಲ ವಾರದಲ್ಲಿಯೇ ವೇತನ ನೀಡಬೇಕು. ಸೇವಾ ಭದ್ರತೆ, ಕೃಪಾಂಕ ನೀಡುವುದು, ಗೌರವ ಧನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಎಚ್.ಮಲ್ಲೇಶ್, ತಾಲೂಕು ಉಪಾಧ್ಯಕ್ಷೆ ಕೆ.ಶೇಖಮ್ಮ, ಪದಾಧಿಕಾರಿಗಳಾದ ಉಮೇಶ, ಶಂಕ್ರಮ್ಮ, ಕುಸುಮಾ, ಮಮತಾ, ರಾಜೇಶ್ವರಿ, ನಟರಾಜ, ಮಹೇಶ, ಮಲ್ಲಿಕಾ, ಶೇಖಣ್ಣ, ಶ್ರೀನಿವಾಸ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net