ಬೈ ಎಲೆಕ್ಷನ್‌ನಲ್ಲಿ ವನಜಾಕ್ಷಿ, ಜ್ಯೋತಿಗೆ ಗೆಲುವು

Kampli Gp Members Elect
Published on

ಕಂಪ್ಲಿ: ತಾಲೂಕಿನ ನಂ.10 ಮುದ್ದಾಪುರ ಗ್ರಾಪಂ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ತಹಸಿಲ್ ಕಚೇರಿಯಲ್ಲಿ ಬುಧವಾರ ಶಾಂತಿಯುತವಾಗಿ ನಡೆಯಿತು.

ನಂ.10 ಮುದ್ದಾಪುರದ 3ನೇ ಕ್ಷೇತ್ರದ ಅಭ್ಯರ್ಥಿ ಬಿ.ವನಜಾಕ್ಷಿ ರಾಘವೇಂದ್ರ 309 ಮತ ಗಳಿಸಿ ವಿಜೇತರಾದರು. ಪ್ರತಿಸ್ಪರ್ಧಿಗಳಾದ ಜಿ.ಮಂಜುನಾಥ 301, ಬಿ.ಲಕ್ಷ್ಮೀನಾರಾಯಣ 15 ಮತಗಳಿಸಿದರು. 20 ಮತತಿರಸ್ಕೃತಗೊಂಡವು.

ಕಣ್ವಿ ತಿಮ್ಮಲಾಪುರದ 7ನೇ ಕ್ಷೇತ್ರದ ಅಭ್ಯರ್ಥಿ ಡಿ.ಜ್ಯೋತಿ ಮುತ್ತಣ್ಣ 321 ಮತಗಳನ್ನು ಗಳಿಸಿ ವಿಜೇತರಾದರು. ಪ್ರತಿಸ್ಪರ್ಧಿ ಗೊಲ್ಲರ ಸುರೇಂದ್ರ 276 ಮತ ಪಡೆದು ಪರಾಭವಗೊಂಡರು. 15 ಮತಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ನಾಗೇಂದ್ರ ತಿಳಿಸಿದರು. ಚುನಾವಣಾ ಮೇಲ್ವಿಚಾರಕ ಜಿ.ಪಂಪಾಪತಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net