ವಿಭೂತಿ, ಲಿಂಗ-ರುದ್ರಾಕ್ಷಿ ಧರಿಸಿ ; ಕೇದಾರ ಜಗದ್ಗುರುಗಳಿಂದ ಆಶೀರ್ವಚನ

Kampli Kedar sir visit to bukkasagar jatre
ಬುಕ್ಕಸಾಗರ ಕರಿಸಿದ್ದೇಶ್ವರರ ಪುಣ್ಯಸ್ಮರಣೋತ್ಸವದ ಧರ್ಮಜಾಗೃತಿ ಸಮಾರಂಭದಲ್ಲಿ ಧಾರ್ಮಿಕ, ಸಾಮಾಜಿಕ ಸೇವೆಗಾಗಿ ಹುಡಾದ ಕುಮಾರಸ್ವಾಮಿ ತಾತಾ, ಹೊಸಪೇಟೆಯ ಸಾಲಿ ಬಸವರಾಜಸ್ವಾಮಿಗಳಿಗೆ ’ಕರಿಸಿದ್ಧಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೇದಾರ ಜಗದ್ಗುರು ಶ್ರೀ ಭೀಮಾಶಂಕರ ಭಗವತ್ಪಾದಂಗಳವರು, ಪ್ರಮುಖರಾದ ವಿಶ್ವಾರಾಧ್ಯ ಶಿವಾಚಾರ್ಯರು, ಗುರುಪಾದದೇವರ ಮಲ್ಲಿಕಾರ್ಜುನ ಶಿವಾಚಾರ್ಯರು, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಎಂ.ಎಸ್.ಶಶಿಧರ ಶಾಸ್ತ್ರಿ ಇತರರಿದ್ದರು.
Published on

ಕರಿಸಿದ್ದೇಶ್ವರರ 12ನೇ ಪುಣ್ಯಸ್ಮರಣೋತ್ಸವ

ಕಂಪ್ಲಿ: ಕರೊನಾ, ಚೀನಾ ರೋಗಗಳಿಗೆ ಹೆದರಬೇಡಿ. ಅವು ಬರುತ್ತವೆ.. ಹೋಗುತ್ತವೆ ಎಂದು ಕೇದಾರ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಭಗವತ್ಪಾದಂಗಳವರು ಹೇಳಿದರು.

ಸಮೀಪದ ಬುಕ್ಕಸಾಗರ ಕರಿಸಿದ್ದೇಶ್ವರ ಮಠದಲ್ಲಿ ಲಿಂ.ಕರಿಸಿದ್ದೇಶ್ವರರ 12ನೇ ಪುಣ್ಯಸ್ಮರಣೋತ್ಸವದ ಧರ್ಮ ಜಾಗೃತಿ ಸಮಾರಂಭದ ದಿವ್ಯಸಾನ್ನಿಧ್ಯವಹಿಸಿ ಸೋಮವಾರ ಮಾತನಾಡಿದರು. ಕಳೆದ ಐದು ದಶಕಗಳಿಂದ ಕರಿಸಿದ್ಧಶಿವಯೋಗಿಗಳ ಮಹಿಮೆ ಅರಿತಿದ್ದೇವೆ. ಶ್ರೀಗಳ ಹಸ್ತದಿಂದ ಮಾಂಸಪಿಂಡ ಮಂತ್ರಪಿಂಡವಾಗುತ್ತದೆ. ವಿಭೂತಿ, ಲಿಂಗ, ರುದ್ರಾಕ್ಷಿಗಳನ್ನು ಧರಿಸಿದಲ್ಲಿ ಜೀವನ ಪಾವನವಾಗುತ್ತದೆ. ಇದನ್ನು ಮಕ್ಕಳಲ್ಲಿ ರೂಢಿಸಬೇಕಿದೆ. ಪಂಚೇಂದ್ರಿಯಗಳನ್ನು ಸದ್ಭಾವನೆಯಲ್ಲಿ ಬಳಸಿದಾಗ ಶಿವತ್ವ ಪ್ರಾಪ್ತವಾಗುತ್ತದೆ. ದೇಶದ ಶಾಂತಿಗಾಗಿ ಪೀಠದಲ್ಲಿ ಮಹಾಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಜ್ಞಾನ ಪ್ರಸಾರವೇ ಪೀಠಗಳ ಉದ್ದೇಶವಾಗಿದ್ದು, ಸರ್ವರೂ ಜ್ಞಾನಗಳಿಸುವಲ್ಲಿ ಮುಂದಾಗಬೇಕು ಎಂದರು.

ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯರು ಮಾತನಾಡಿ, ಕರಿಸಿದ್ಧೇಶ್ವರ ಮಠವು ಗುರು ಸದ್ಭಕ್ತರಲ್ಲಿ ಸಾಮರಸ್ಯ ಸಾಧಿಸುವಲ್ಲಿ ಕಲ್ಯಾಣಕರ್ನಾಟಕ ಭಾಗದಲ್ಲಿಯೇ ಮುಂಚೂಣಿಯಲ್ಲಿದೆ. ಕರಿಸಿದ್ಧಶ್ರೀಗಳು ತಪೋಬಲದಿಂದ ಸದ್ಭಕ್ತರನ್ನು ಉದ್ಧರಿಸಿದ್ದಾರೆ. ಸಂತರು ಕ್ರಿಯಾಶುದ್ಧರಾಗುವ ಮೂಲಕ ಜಗದ ಹಿತ ಸಾಧಿಸಬೇಕಿದೆ ಎಂದರು.

ಜಗದ್ಗುರು ಶ್ರೀ ಭೀಮಾಶಂಕರ ಭಗವತ್ಪಾದಂಗಳ ಅಡ್ಡಪಲ್ಲಕ್ಕಿ ಮೆರವಣಿಗೆ, ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಾಮೂಹಿಕ ವಿವಾಹಗಳು ನಡೆದವು. ಧಾರ್ಮಿಕ, ಸಾಮಾಜಿಕ ಸೇವೆಗಾಗಿ ಹುಡಾದ ಕುಮಾರಸ್ವಾಮಿ ತಾತಾ, ಹೊಸಪೇಟೆಯ ಸಾಲಿ ಬಸವರಾಜ ಸ್ವಾಮಿಗಳಿಗೆ ‘ಕರಿಸಿದ್ಧಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಶ್ವಾರಾಧ್ಯ ಶಿವಾಚಾರ್ಯರು, ಗುರುಪಾದದೇವರ ಮಲ್ಲಿಕಾರ್ಜುನ ಶಿವಾಚಾರ್ಯರು, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಕೊಟ್ಟೂರಿನ ಸಿದ್ಧಲಿಂಗ ಶಿವಾಚಾರ್ಯರು, ಪಂಚವಣಗಿಯ ಸಿದ್ಧಲಿಂಗ ಶಿವಾಚಾರ್ಯರು, ಬಳ್ಳಾರಿಯ ಕಲ್ಯಾಣಸ್ವಾಮಿ, ಗೋವಿನಕೋವಿಯ ವಿಶ್ವರಾಧ್ಯ ಮಹಾಲಿಂಗಹಾಲ ಸ್ವಾಮಿ, ಬಂಗಾರಿಕ್ಯಾಂಪಿನ ಡಾ.ಸಿದ್ಧರಾಮ, ಹಂಚಿನಾಳಕ್ಯಾಂಪಿನ ಶಿವಲಿಂಗಯ್ಯತಾತ, ವೆಂಕಟಾಪುರದ ನಾಗಲಿಂಗಪ್ಪತಾತ, ಬೂದಗುಂಪದ ಸಿದ್ದೇಶ್ವರದೇವರು, ಕಾರಟಗಿಯ ವೀರಭದ್ರ ಶರಣರು, ಹೆಬ್ಬಾಳ್ ಶಿವಪ್ರಕಾಶಶರಣರು, ಗುಡದೂರಿನ ನೀಲಕಂಠತಾತ, ಎಂ.ಎಸ್.ಶಶಿಧರಶಾಸ್ತ್ರಿ, ವಿಜಯನಗರ ಡಿಸಿ ಎಂ.ಎಸ್.ದಿವಾಕರ, ಎಸ್ಪಿ ಹರಿಬಾಬು, ತಹಸೀಲ್ದಾರ್ ಶೃತಿ ಮಾಳಪ್ಪಗೌಡರು, ಪ್ರಮುಖರಾದ ಶರಣಬಸಪ್ಪ ಕೋಲ್ಕಾರ, ಗೊಗ್ಗ ಚನ್ನಬಸವರಾಜ, ಐ.ಸಂಗನಬಸಪ್ಪ, ಸಾಲಿ ಸಿದ್ದಯ್ಯ, ಹೇಮಣ್ಣ, ವಿ.ಕೆ.ಹನುಮಂತಪ್ಪ, ಪಿ.ಮೂಕಯ್ಯಸ್ವಾಮಿ, ಎಚ್.ಎಂ.ಕಾಶಿನಾಥಸ್ವಾಮಿ, ಟಿ.ರಾಜೇಶ್ವರಿ, ಸಿದ್ದೇಶ್, ಎಚ್.ಎಂ.ವಿಶ್ವನಾಥ, ಎಸ್.ಡಿ.ಬಸವರಾಜ ಸೇರಿ ಸದ್ಭಕ್ತರಿದ್ದರು.

ಬುಕ್ಕಸಾಗರ ಗ್ರಾಮದಲ್ಲಿ ಕರಿಸಿದ್ದೇಶ್ವರ ಶಿವಯೋಗಿಗಳ ಮಹಾರಥೋತ್ಸವ ಸೋಮವಾರ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net