

ಕಂಪ್ಲಿ: ಬಿಜೆಪಿ ಸರ್ಕಾರಗಳ ಸಾಧನೆಗಳನ್ನು ಜನತೆಗೆ ತಿಳಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಪಕ್ಷದ ಸಹ ಪ್ರಭಾರಿ ಸಿಂಗನಾಳ್ ವಿರೂಪಾಕ್ಷಪ್ಪ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಬಿಜೆಪಿ ಮಂಡಲದಿಂದ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕರ್ತರು ಮನೆ ಮನೆಗೆ ಹೋಗಿ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವಂತಹ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಕ್ಷೇತ್ರಾಧ್ಯಕ್ಷ ಅಳ್ಳಳ್ಳಿ ವೀರೇಶ್ ಮಾತನಾಡಿ, ಜ.2ರಿಂದ 12 ರವರೆಗೆ ಕ್ಷೇತ್ರದ 239 ಮತಗಟ್ಟೆಗಳಲ್ಲಿ ಬೂತ್ ವಿಜಯ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಲ್ಲದೇ, ಬಿಜೆಪಿ ಕಾರ್ಯಕರ್ತರ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸಿ ಜನತೆಯಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹುಡೇದ್ ಸುರೇಶ್, ಪ್ರಮುಖರಾದ ಪಿ.ಬ್ರಹ್ಮಯ್ಯ, ಎನ್.ಪುರುಷೋತ್ತಮ, ಬಿ.ಸಿದ್ದಪ್ಪ, ಕೊಡಿದಲರಾಜು, ಜಿ.ರಾಮಣ್ಣ, ಡಿ.ಶ್ರೀಧರಶ್ರೇಷ್ಠಿ, ಡಾ.ವೆಂಕಟೇಶ್, ಭಾಸ್ಕರ್‌ರೆಡ್ಡಿ, ಬಿ.ದೇವೇಂದ್ರ, ಬಿ.ನಾಗೇಂದ್ರ, ಎಂ.ವೆಂಕಟೇಶ್, ಹೊನ್ನೂರ್‌ಸಾಬ್, ಹೊನ್ನೂರಪ್ಪ, ರಾಮಲೆಪ್ಪ, ಬಿ.ರಾಜಾವಲಿ, ಜೆ.ಶಿವಕುಮಾರ್, ಮಂಜುನಾಥ, ವೀರೇಶ್, ಲೋಕೇಶ್, ಬಸವರಾಜ ಇತರರಿದ್ದರು.