

ಕಂಪ್ಲಿ: ಸುಂದರಿ ಶುಗರ್ಸ್ ಕಾರ್ಖಾನೆ ನಿರ್ಮಾಣ ಕಾಮಗಾರಿ ಮಂಗಳವಾರ ಆರಂಭಗೊಂಡಿತು. ಪುರಸಭೆ ಮಾಜಿ ಅಧ್ಯಕ್ಷ ಪಿ.ಬ್ರಹ್ಮಯ್ಯ ಮಾತನಾಡಿ, ರೈತರ ಹಿತದೃಷ್ಟಿಯಿಂದ ಸುಂದರಿ ಶುಗರ್ಸ್ ಕಾರ್ಖಾನೆ ನಿರ್ಮಾಣವಾಗುತ್ತಿದೆ. ಮೊದಲಿಗೆ ಮಿಲ್‌ಹೌಸ್ ನಿರ್ಮಿಸಲಾಗುವುದು. ಕಾರ್ಖಾನೆಯ ನೀಲಿ ನಕ್ಷೆ ತಯಾರಾಗಿದ್ದು, ಯಂತ್ರಗಳನ್ನು ಅಳವಡಿಸಲಾಗುವುದು. ಪಟ್ಟಣದಲ್ಲಿ ಸುಧಾರಿತ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಮೂಲಕ ರೈತರಿಗೆ ಅನುಕೂಲ ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಯೋಜಿಸಿದ್ದು, ತ್ವರಿತವಾಗಿ ಕಾರ್ಖಾನೆ ಸ್ಥಾಪನೆಯ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ತಾಂತ್ರಿಕ ಸಲಹೆಗಾರ ಸುರೇಶ್‌ಬಾಬು, ಗುತ್ತಿಗೆದಾರ ಮಹಾಂತೇಶ್, ಸೈಟ್ ಇನ್‌ಚಾರ್ಜ್ ಅಬ್ದುಲ್ಲಾ ಇತರರಿದ್ದರು.