ಆವರಣ ಗೋಡೆ ನಿರ್ಮಾಣಕ್ಕೆ ತೀರ್ಮಾನ

120123 Kampli APMC Meeting
ಕಂಪ್ಲಿ ಎಪಿಎಂಸಿ ಕಚೇರಿಯಲ್ಲಿ ಜರುಗಿದ ಸದಸ್ಯರ ಸಾಮಾನ್ಯ ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ಕೆ.ಹೂವಣ್ಣ ಗುರುವಾರ ಮಾತನಾಡಿದರು.
Published on

ಕಂಪ್ಲಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಕಚೇರಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯರ ಸಾಮಾನ್ಯ ಸಭೆ ಗುರುವಾರ ಜರುಗಿತು. ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಅಧ್ಯಕ್ಷ ಕೆ.ಹೂವಣ್ಣ ಮಾತನಾಡಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮನವಿಯಂತೆ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದ ಆವರಣಗೋಡೆ ನಿರ್ಮಾಣ, ಎಪಿಎಂಸಿ ಆವರಣದಲ್ಲಿ ಬೆಳೆದ ನಿರುಪಯುಕ್ತ ಗಿಡಗಳ ತೆರವು, ವಿದ್ಯುತ್ ದೀಪ ಅಳವಡಿಕೆ, ರಸ್ತೆ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ರೂಪಿಸಲು ತೀರ್ಮಾನಿಸಲಾಗಿದೆ ಎಂದರು.

ಈಗಾಗಲೇ ಎಪಿಎಂಸಿ ಆವರಣದಲ್ಲಿ ಹಂಚಿಕೆ ಮಾಡಿದ ನಿವೇಶನದಲ್ಲಿ ಕಟ್ಟಡ ನಿರ್ಮಿಸಿಕೊಳ್ಳಲು 17ಜನ ವರ್ತಕರಿಗೆ ಪರವಾನಗಿ ನೀಡಲು ಅನುಮೋದಿಸಲಾಗಿದೆ. ಆಹಾರ ಇಲಾಖೆಗೆ ಒಂದು ಮಳಿಗೆಯನ್ನು ಬಾಡಿಗೆ ನೀಡಲು ತೀರ್ಮಾನಿಸಲಾಗಿದೆ ಎಂದರು.

ಸಭೆಯಲ್ಲಿ ಎಪಿಎಂಸಿ ಸದಸ್ಯರಾದ ಎಸ್.ಭಾಸ್ಕರ್‌ರೆಡ್ಡಿ, ಸಣಾಪುರದ ವೈ.ವಿಜಯಮಹಾಂತೇಶ್, ಅಗಳಿ ಪಂಪಾಪತಿ, ದೇವಲಾಪುರದ ಕುರಿ ಗಾದಿಲಿಂಗಪ್ಪ, ಡಾ.ವೆಂಕಟೇಶ್ ಸಿ.ಭರಮಕ್ಕನವರ್, ಇಟಗಿಯ ಒ.ಪಿ.ದಾದಾಖಲಂದರ್, ಮಾವಿನಹಳ್ಳಿ ರಾಮಚಂದ್ರಪ್ಪ, ಕಂದಕೂರು ಸಂಗಮೇಶ್, ಜವುಕಿನ ಎಚ್.ಮಾರೆಮ್ಮ ದೊಡ್ಡಯಂಕಪ್ಪ, ದೇವಸಮುದ್ರ ಪಾರ್ವತಮ್ಮ ದೇವರಮನೆ ಕರೆಪ್ಪ, ಕಾರ್ಯದರ್ಶಿ ಕೆ.ಎರೆಗೌಡ, ಮೇಲ್ವಿಚಾರಕ ಸುಕುರ್‌ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net