

ಕಂಪ್ಲಿ: ಅಂಜನಾದ್ರಿ ಬೆಟ್ಟದಲ್ಲಿ ಶ್ರಾವಣಮಾಸ ನಿಮಿತ್ತ ಪ್ರತಿ ಶನಿವಾರ ನಡೆಯಲಿರುವ ಪರಿಕ್ರಮ ಕಾರ್ಯಕ್ರಮದಲ್ಲಿ ತಾಲೂಕಿನ ಹನುಮಮಾಲಾಧಾರಿಗಳು, ಹನುಮ ಸದ್ಭಕ್ತರು ಭಾಗವಹಿಸಲಿ ಎಂದು ಸಕ್ಕರೆ ಕಾರ್ಖಾನೆಯ ಮಾರುತಿ ಸೇವಾ ಸಮಿತಿ ಪ್ರಮುಖ ಎ.ದುರುಗೇಶ್ ಹೇಳಿದರು.
ಪಟ್ಟಣದ ಸಕ್ಕರೆ ಕಾರ್ಖಾನೆಯ ಆಂಜನೇಯ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಿತಿ ಸಭೆಯಲ್ಲಿ ಮಾತನಾಡಿ, ಅಂಜನಾದ್ರಿ ಹನುಮನ ಜನ್ಮಸ್ಥಳವಾಗಿದ್ದು ದೃಢ ಮನಸ್ಸಿನಿಂದ ಪರಿಕ್ರಮ(ಪ್ರದಕ್ಷಿಣೆ) ಸೇವೆ ಸಲ್ಲಿಸಿದರೆ ಇಷ್ಟಾರ್ಥ ನೆರವೇರುತ್ತವೆ ಎನ್ನುವ ನಂಬಿಕೆಯಿದೆ. ಇದಕ್ಕಾಗಿ ಅಂಜನಾದ್ರಿಯಲ್ಲಿ ಚಿಕ್ಕರಾಂಪುರದ ಆಂಜನೇಯ ದೇವಸ್ಥಾನದ ಪೀಠಾಧಿಪತಿ ಮಹಾಂತ ವಿದ್ಯಾದಾಸ್ ಬಾಬಾ ನೇತೃತ್ವದಲ್ಲಿ ಪರಿಕ್ರಮ ಕಾರ್ಯಕ್ರಮ ಶನಿವಾರ ಮಧ್ಯಾಹ್ನ 4 ಗಂಟೆಗೆ ನಡೆಯಲಿದೆ ಎಂದು ತಿಳಿಸಿದರು.
ಸೇವಾ ಸಮಿತಿ ಪದಾಧಿಕಾರಿಗಳಾದ ಲೋಹಿತ್‌ಕುಮಾರ್, ಶಿವಕುಮಾರ್, ವಿಶ್ವನಾಥ, ಮಂಜುನಾಥ, ಸಂತೋಷ್‌ಕುಮಾರ್, ಕೆ.ವಿ.ನಾಗರಾಜ, ಗೋಪಾಲ್, ವೆಂಕಟೇಶ, ಮನೋಹರ, ಶ್ರೀನಿವಾಸ ಇತರರಿದ್ದರು.