ಬಡ ರೈತರಿಗೆ ಭೂ ಮಂಜೂರಾತಿ ಮಾಡಿ

Kampli letter
ಕಂಪ್ಲಿಯಲ್ಲಿ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಪದಾಧಿಕಾರಿಗಳು ಕರಪತ್ರ ಬಿಡುಗಡೆಗೊಳಿಸಿದರು. ಪ್ರಮುಖರಾದ ಕರಿಯಪ್ಪ ಗುಡಿಮನಿ, ವಸಂತರಾಜ ಕಹಳೆ, ನೀಲಪ್ಪ ಪೇಂಟರ್, ಇ.ಧನಂಜಯ, ರವಿ ಮಣ್ಣೂರು ಇತರರಿದ್ದರು.
Published on

ಕಂಪ್ಲಿ: ಬಡ ರೈತರಿಗೆ ಭೂ ಮಂಜೂರಾತಿ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಇಲ್ಲಿನ ಡಾ.ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಪದಾಧಿಕಾರಿಗಳು ಕರಪತ್ರ ಬಿಡುಗಡೆಗೊಳಿಸಿ ಒತ್ತಾಯಿಸಿದರು.

ರಾಜ್ಯ ಸಮಿತಿ ಸದಸ್ಯ ಕರಿಯಪ್ಪ ಗುಡಿಮನಿ ಮಾತನಾಡಿ, ಜಿಲ್ಲೆಯ 95,649.17 ಎಕರೆ ಭೂಮಿಗೆ ಸಂಬಂಧಿಸಿದ 37,374 ಅರ್ಜಿಗಳು ವಿಲೇವಾರಿಯಾಗದೆ ಉಳಿದಿವೆ. ಇದರಲ್ಲಿ ಕಂಪ್ಲಿ ತಾಲೂಕಿನ 1455 ಅರ್ಜಿಗಳು ಸಲ್ಲಿಕೆಯಾಗಿದ್ದು, 2623.95ಎಕರೆ ಭೂಮಿ ಮಂಜೂರಾತಿ ಅರ್ಜಿಗಳು ಸೇರಿವೆ. ಭೂಮಿ ಮಂಜೂರಾಗಬೇಕಿದೆ. ಅನೇಕ ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುತುವರ್ಜಿ ವಹಿಸಿ ಭೂ ಮಂಜೂರಾತಿಗೆ ತುರ್ತು ಕ್ರಮ ಕೈಗೊಳ್ಳಬೇಕಿದೆ.

ಅ.5ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಭೂಮಿ ವಸತಿ ಹಕ್ಕು ವಂಚಿತರ ಪ್ರಾತಿನಿಧ್ಯ ಸಮಾವೇಶ ಹಮ್ಮಿಕೊಂಡಿದ್ದು, ಸಂತ್ರಸ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು. ಪದಾಧಿಕಾರಿಗಳಾದ ವಸಂತರಾಜ ಕಹಳೆ, ನೀಲಪ್ಪ ಪೇಂಟರ್, ಇ.ಧನಂಜಯ, ರವಿ ಮಣ್ಣೂರು, ಶ್ರೀಕಾಂತ, ಎಚ್.ಮಲ್ಲಿಕಾರ್ಜುನ, ಎ.ಎಸ್.ಯಲ್ಲಪ್ಪ, ಶಾಂತಪ್ಪ ಪೂಜಾರಿ, ಸಿ.ರಾಮಪ್ಪ, ರಾಕೇಶ, ಶ್ರೀನಿವಾಸ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net