ಎಲ್ಲರ ಪ್ರಯತ್ನದೊಂದಿಗೆ ಎಪಿಎಂಸಿ ಸ್ವತಂತ್ರ, ಶಾಸಕ ಜೆ.ಎನ್.ಗಣೇಶ್ ಅಭಿಪ್ರಾಯ

050922 Ajavuku Kakihalla Bridge MLA JN Ganesh watched
ಆಜವುಕು ಬಳಿಯ ಕಾಕಿಹಳ್ಳದ ಶಿಥಿಲಗೊಂಡ ಸೇತುವೆಯನ್ನು ಶಾಸಕ ಜೆ.ಎನ್.ಗಣೇಶ್ ವೀಕ್ಷಿಸಿದರು.
Published on

ಕಂಪ್ಲಿ: ನನ್ನ ಪ್ರಯತ್ನ ಜತೆ ವರ್ತಕರು, ಅಕ್ಕಿಗಿರಣಿ ಮಾಲೀಕರು, ರೈತರ ಒತ್ತಡದಿಂದ ಸ್ಥಳೀಯ ಎಪಿಎಂಸಿ ಸ್ವತಂತ್ರ ಮಾರುಕಟ್ಟೆಯಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ಅಂಜನಾಪುರದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಯೋಜನಡಿ ಅಂಜನಾಪುರ ಬೈಪಾಸ್‌ರಸ್ತೆಯಿಂದ ಜವುಕು ಮುಖ್ಯರಸ್ತೆತನಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಸರ್ಕಾರಿ ಕಾಮಗಾರಿ ನಿರ್ವಹಣೆಗೆ ಗ್ರಾವೆಲ್ ಅಗತ್ಯವಿದ್ದು, ತೊಂದರೆಯಾಗದಂತೆ ಡಿಸಿ ಕ್ರಮ ಕೈಗೊಳ್ಳಬೇಕಿದೆ. ಸ್ಥಳೀಯ ತುಂಗಭದ್ರಾ ನದಿ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾತಿ ಕುರಿತು ಈವರೆಗೂ ಸ್ಪಷ್ಟನೆಯಿಲ್ಲ ಎಂದರು.

ಜವುಕು ಬಳಿ ಶಿಥಿಲಗೊಂಡ ಕಾಕಿಹಳ್ಳದ ಸೇತುವೆಯನ್ನು ಶಾಸಕರು ವೀಕ್ಷಿಸಿದರು. ಪ್ರಮುಖರಾದ ಸೋಮಿರಾಜ, ರಾಮಲಿಂಗಯ್ಯಸ್ವಾಮಿ ಹಾಗೂ ಅನೇಕರು ಸೇತುವೆ ನಿರ್ಮಿಸುವಂತೆ ಒತ್ತಾಯಿಸಿದರು.

ಪ್ರಮುಖರಾದ ಪಂಪಾಪತಿ, ಸಿ.ಬಸವರಾಜ್, ಎನ್.ರತ್ನಮ್ಮ ಬಸವರಾಜ್, ನಿಂಗಮ್ಮ, ರಾಮನಗೌಡ, ಕೆ.ಈರಣ್ಣ, ಎಸ್.ಷಣ್ಮುಖಪ್ಪ, ವೀರಭದ್ರಗೌಡ, ಕನಕಪ್ಪ, ಬಿ.ತಿಮ್ಮಾರೆಡ್ಡಿ, ಕುಮಾರಸ್ವಾಮಿ, ಮಲ್ಲಿಕಾರ್ಜುನ, ಎಚ್.ವೀರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net