

ಕಂಪ್ಲಿ: ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಪಶು ಸಂಗೋಪನೆ ತರಬೇತಿ ಪಡೆಯುವವರಿಗೆ ಮಂಗಳವಾರ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಯೋಗ ಉಪನ್ಯಾಸಕ ಡಿ.ಮಹೇಶ್‌ಬಾಬು ಯೋಗ ತರಬೇತಿ ನೀಡಿದರು.
ರೈತರು ಆರೋಗ್ಯ ಕಾಪಾಡಿಕೊಳ್ಳುವ ಹಿನ್ನೆಲೆಯಲ್ಲಿ ನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ ಮಾಡಬೇಕು. ಬಸ್ತ್ರಿಕಾ, ನಾಡಿ ಶೋಧನಾ ಪ್ರಾಣಾಯಾಮ, ಸೂರ್ಯ ನಮಸ್ಕಾರ, ತಾಡಾಸಾನ ಸೇರಿದಂತೆ ನಾನಾ ಆಸನಗಳನ್ನು ಸೆ.27 ರತನಕ ಬೋಧಿಸಲಾಗುವುದು.
ಸಾಯನಿಕ ಮಿಶ್ರಿತ ಆಹಾರ ಸೇವನೆ, ಕಲುಷಿತ ವಾತಾವರಣದಿಂದಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಾಗಿದೆ. ಯೋಗ, ಧ್ಯಾನ, ಪ್ರಾಣಾಯಾಮದ ನಿತ್ಯ ಅಭ್ಯಾಸಗಳಿಂದ ಉತ್ತಮ ಆರೋಗ್ಯ ಗಳಿಸಬಹುದು ಎಂದು ಯೋಗ ಉಪನ್ಯಾಸಕ ಡಿ.ಮಹೇಶ್‌ಬಾಬು ಹೇಳಿದರು.