ಆಡಳಿತಸೌಧ ಉದ್ಘಾಟನೆಗೆ ಸಿದ್ದರಾಮಯ್ಯ

Kampli Mla
ಕಂಪ್ಲಿಯ ತಾಲೂಕು ಆಡಳಿತ ಸೌಧ ಬಳಿ ತಾಪಂ ಕಚೇರಿ ಕಟ್ಟಡ ನಿರ್ಮಾಣದ ಕುರಿತು ಶಾಸಕ ಜೆ.ಎನ್.ಗಣೇಶ್ ಅವರು ಇಒ ಆರ್.ಕೆ.ಶ್ರೀಕುಮಾರ್ ಅವರೊಂದಿಗೆ ಚರ್ಚಿಸಿದರು. ಎಡಿ ಕೆ.ಎಸ್.ಮಲ್ಲನಗೌಡ, ಪ್ರಮುಖರಾದ ಕರಿಬಸವನಗೌಡ, ಡಾ.ಎ.ಸಿ.ದಾನಪ್ಪ, ಗುತ್ತಿಗೆದಾರ ರಂಗನಾಯಕಲು ಇತರರಿದ್ದರು.
Published on

ಕಂಪ್ಲಿ: ತಾಲೂಕು ಆಡಳಿತಸೌಧ ನಿರ್ಮಾಣ ಕಾಮಗಾರಿ ಮುಗಿಯುವ ಹಂತಕ್ಕೆ ತಲುಪಿದ್ದು, ಶೀಘ್ರವೇ ದಿನಾಂಕ ನಿಗದಿಪಡಿಸಿ ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಮಾಡಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ತಾಲೂಕಿನ ನಂ.10 ಮುದ್ದಾಪುರ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಆಡಳಿತಸೌಧ ಪಕ್ಕದಲ್ಲಿ ಮಂಗಳವಾರ 80 ಲಕ್ಷ ರೂ. ವೆಚ್ಚದಲ್ಲಿ ತಾಪಂ ಕಚೇರಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ತಾಪಂ ಚುನಾವಣೆ ಘೋಷಣೆಯೊಳಗೆ ತಾಪಂ ಕಚೇರಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗುವುದು. ಹಂತಹಂತವಾಗಿ ತಾಲೂಕಿನ ಎಲ್ಲ ಇಲಾಖೆಗಳ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು ಎಂದರು. ಬಳಿಕ ಹಳೇ ನೆಲ್ಲೂಡಿ, ಕೊಟ್ಟಾಲ್ ಗ್ರಾಮದಲ್ಲಿ 1.82 ಕೋಟಿ ರೂ. ವೆಚ್ಚದ ಕುಡಿವ ನೀರಿನ ಕಾಮಗಾರಿಗೆ ಚಾಲನೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ತಾಪಂ ಇಒ ಆರ್.ಕೆ.ಶ್ರೀಕುಮಾರ್, ಎಡಿ ಕೆ.ಎಸ್.ಮಲ್ಲನಗೌಡ, ಗ್ರಾಪಂ ಅಧ್ಯಕ್ಷೆ ಸೋಮೇಶ್ವರಿ, ಉಪಾಧ್ಯಕ್ಷೆ ಜಡೆ ಸಾವಿತ್ರಮ್ಮ, ಪ್ರಮುಖರಾದ ಕರಿಬಸವನಗೌಡ, ಡಾ.ಎ.ಸಿ.ದಾನಪ್ಪ, ವೈ.ಅಬ್ದುಲ್ ಮುನಾಫ್, ಕೆ.ಮಸ್ತಾನ್ ಸಾಬ್, ಲಕ್ಷ್ಮೀ ನಾರಾಯಣ, ಕಟ್ಟೆೆ ವೆಂಕಟೇಶ್, ಕೇಶವರೆಡ್ಡಿ, ರಾಜು ಜೈನ್, ಕೆ.ವಿಜಯ ಮಹಾಂತೇಶ್, ಎಲ್.ರಾಮನಾಯ್ಡು, ಗೌಡ್ರು ಅಂಜಿನಪ್ಪ, ಸುರೇಶ ಗೌಡ್ರು, ಗುತ್ತಿಗೆದಾರ ರಂಗನಾಯಕಲು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net