ಶೈಕ್ಷಣಿಕ ವರ್ಷಾರಂಭಕ್ಕೆ ಮೊದಲ ದಿನ ಐದು ಮಕ್ಕಳ ಪ್ರವೇಶ: ಕಂಪ್ಲಿಯಲ್ಲಿ ಸಿಆರ್‌ಪಿ ಜೆ.ಕೆ.ಮಂಜುನಾಥ ಮಾಹಿತಿ

15062021 Kampli School Addmition
Published on

ಕಂಪ್ಲಿ: 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ಮೊದಲ ದಿನ ಪಟ್ಟಣದ ಸತ್ಯನಾರಾಯಣ ಪೇಟೆಯ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಐದು ಮಕ್ಕಳು ಪ್ರವೇಶ ಪಡೆದಿದ್ದಾರೆ ಎಂದು ಸಿಆರ್‌ಪಿ ಜೆ.ಕೆ.ಮಂಜುನಾಥ ಹೇಳಿದರು.

ಇಲ್ಲಿನ ಸತ್ಯನಾರಾಯಣ ಪೇಟೆಯ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಮಕ್ಕಳ ದಾಖಲಾತಿ ಮಾಡಿಕೊಂಡು ಮಾತನಾಡಿದರು. ಕನ್ನಡ ಮಾಧ್ಯಮದ ಒಂದನೇ ತರಗತಿಗೆ ಇಬ್ಬರು, ಆಂಗ್ಲ ಮಾಧ್ಯಮದ ಒಂದನೇ ತರಗತಿಗೆ ಮೂವರು ಮಕ್ಕಳು ಪ್ರವೇಶ ಪಡೆದಿದ್ದಾರೆ. ಬಹುತೇಕ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಶಾಲಾವರಣ ಸ್ವಚ್ಛತೆ, ಶಾಲಾ ಮಕ್ಕಳ ದಾಖಲಾತಿ, ಸೇತುಬಂಧಕ್ಕೆ ಸಿದ್ಧತೆ, ಶಾಲಾ ಅಭಿವೃದ್ಧಿ ಯೋಜನೆ ಸಿದ್ಧಪಡಿಸುವುದು ಸೇರಿ ಇಲಾಖೆಯ ಸೂಚಿತ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಜು.1ರಿಂದ ಶಾಲಾರಂಭಗೊಳ್ಳಲಿದ್ದು ಸರ್ಕಾರದ ಮಾರ್ಗಸೂಚಿಯಂತೆ ಮಕ್ಕಳಿಗೆ ಆನ್‌ಲೈನ್ ಇಲ್ಲವೇ ಆಫ್‌ಲೈನ್ ಮೂಲಕ ಬೋಧನೆ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net