ಮೂರು ದಿನದಲ್ಲಿ ಆಧಾರ್‌ಲಿಂಕ್ ಮಾಡಲು ಬಿಎಲ್‌ಒಗಳಿಗೆ ಪುರಸಭೆ ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ ಸೂಚನೆ

010922 Kampli Meeting of BLOs
ಕಂಪ್ಲಿ ಪುರಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬಿಲ್‌ಒಗಳ ಸಭೆಯಲ್ಲಿ ಆರ್‌ಐ ಕೆ.ವೆಂಕೋಬಾ ಮಾತನಾಡಿದರು.
Published on

ಕಂಪ್ಲಿ: ಮತದಾರ ಚೀಟಿಗೆ ಆಧಾರ್ ಲಿಂಕ್ ಮಾಡುವಂತೆ ಜನರಲ್ಲಿ ಬಿಎಲ್‌ಒಗಳು ಜಾಗೃತಿ ಮೂಡಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ ಹೇಳಿದರು.

ಪುರಸಭಾಂಗಣದಲ್ಲಿ ಗುರುವಾರ ಆಯೋಜಿಸಿದ ಬಿಎಲ್‌ಒಗಳ ಸಭೆಯಲ್ಲಿ ಮಾತನಾಡಿದರು. ಪಟ್ಟಣ ವ್ಯಾಪ್ತಿಯಲ್ಲಿ 32 ಮತಗಟ್ಟೆಗಳಿದ್ದು, 32 ಸಾವಿರ ಮತದಾರರಿದ್ದಾರೆ. ಎಲ್ಲ ಮತದಾರರ ಚೀಟಿಯನ್ನು ಆಧಾರ್‌ಲಿಂಕ್ ಮಾಡಿಸುವ ಪ್ರಕ್ರಿಯೆ ಚುರುಕುಗೊಳಿಸಲಾಗುತ್ತಿದೆ ಎಂದರು. ಆರ್‌ಐ ಕೆ.ವೆಂಕೋಬಾ ಮಾತನಾಡಿ, ಆಶಾ ಕಾರ್ಯಕರ್ತೆಯರು, ಪುರಸಭೆ ಸಿಬ್ಬಂದಿಯನ್ನು ಸಹಕಾರಕ್ಕೆ ತೆಗೆದುಕೊಂಡು ಬಿಎಲ್‌ಒಗಳು ಮೂರು ದಿನದೊಳಗೆ ಎಲ್ಲ ಮತದಾರರ ಗುರುತಿನ ಚೀಟಿಗಳಿಗೆ ಆಧಾರ್‌ಲಿಂಕ್ ಮಾಡಿಸಬೇಕು ಎಂದರು.

ಕೆಲವು ಬಿಎಲ್‌ಒಗಳು ಈ ಸಂದರ್ಭ ಮಾತನಾಡಿ, ಮನೆ ಮನೆಗೆ ಹೋದಾಗ ಕೆಲವರು ಸ್ವತಃ ಆಧಾರ್‌ಲಿಂಕ್ ಮಾಡಿಕೊಂಡಿದ್ದಾಗಿ ತಿಳಿಸುತ್ತಾರೆ ಎಂಬುದೂ ಸೇರಿ ವಿವಿಧ ಸಮಸ್ಯೆಗಳನ್ನು ಹೇಳಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net