ಬಲಿಜ ಸಂಘದಿಂದ ಹೋರಾಟ 27ರಂದು; ಕಾರ್ಯದರ್ಶಿ ಇಂಗಳಗಿ ನಾರಾಯಣಪ್ಪ ಮಾಹಿತಿ

24012023 kampli balija samaja meeting
Published on

ಕಂಪ್ಲಿ: ರಾಜ್ಯದ ಬಲಿಜ ಸಮುದಾಯವನ್ನು ಪೂರ್ಣ ಪ್ರಮಾಣದಲ್ಲಿ 2ಎ ಮೀಸಲಿಗೆ ಸೇರಿಸುವಂತೆ ಜ.27ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿರುವ ಹೋರಾಟದಲ್ಲ್ಲಿ ಸಮುದಾಯದ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಬಲಿಜ ಸಂಘದ ತಾಲೂಕು ಕಾರ್ಯದರ್ಶಿ ಇಂಗಳಗಿ ನಾರಾಯಣಪ್ಪ ಹೇಳಿದರು.

ಪಟ್ಟಣದ ಮಾರುತಿನಗರದ ಯೋಗಿ ನಾರೇಯಣ ಯತೀಂದ್ರ ಅವರ ಬಲಿಜ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಮಹಿಳಾ ಬಲಿಜ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. 1994ಕ್ಕೂ ಮೊದಲು 2ಎ ಮೀಸಲಿಗೆ ಸೇರ್ಪಡೆಗೊಂಡಿದ್ದ ಬಲಿಜರನ್ನು ಏಕಾಏಕಿ 3ಎಗೆ ಸೇರಿಸಿ, ಅನ್ಯಾಯ ಎಸಗಲಾಯಿತು. ಹೋರಾಟದಿಂದಾಗಿ 2011ರಲ್ಲಿ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಶಿಕ್ಷಣಕ್ಕೆ ಮಾತ್ರ 2ಎ ಮೀಸಲು ನೀಡಿದರು. ಸಮುದಾಯದವರು ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿದ್ದು ಶಿಕ್ಷಣದೊಂದಿಗೆ ಉದ್ಯೋಗ, ರಾಜಕೀಯಕ್ಕೂ 2ಎ ಮೀಸಲು ಅಗತ್ಯವಿದೆ ಎಂದರು.

ಬಲಿಜ ಸಂಘದ ತಾಲೂಕು ಅಧ್ಯಕ್ಷ ಕವಿತಾಳ ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಬಲಿಜ ಸಂಘದ ಅಧ್ಯಕ್ಷೆ ಶಾರದಾ ಲೋಕೇಶ್, ಪದಾಧಿಕಾರಿಗಳಾದ ಕೆ.ಅನಿಲ್, ಎಸ್.ರಾಜನ್, ಲೋಕೇಶ್, ನಾಗರಾಜು, ಶಂಕರ್, ಕೆ.ವಿದ್ಯಾಶಿವಕುಮಾರ್, ಕೆ.ಸಾವಿತ್ರಿ, ಕಾವ್ಯಾ, ರೂಪಕಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net