

ಕಂಪಲಾಪುರ : ಯಾವುದೇ ಸಂಘ ಸಂಸ್ಥೆ ಗಳನ್ನು ಆರಂಭಿಸುವುದು ಎಷ್ಟು ಮುಖ್ಯವೋ, ಅವುಗಳ ಉದ್ದೇಶ ಮತ್ತು ಮಹತ್ವ ಉಳಿಸಿಕೊಂಡು ಹೋಗುವುದೂ ಅಷ್ಟೇ ಮುಖ್ಯ ಎಂದು ವಕೀಲ ಕೆ. ಭಾಸ್ಕರ್ ಹೇಳಿದರು.
ಕಂಪಲಾಪುರ ಕೊಪ್ಪಲಿನಲ್ಲಿ ಸಂಗೊಳ್ಳಿ ರಾಯಣ್ಣ ಸ್ನೇಹ ಬಳಗದ ನಾಮಫಲಕವನ್ನು ಭಾನುವಾರ ಅನಾವರಣಗೊಳಿಸಿ ಅವರು ಮಾತನಾಡಿದರು. ಸಂಘ ಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ ಸಮಾಜದ ಆಗುಹೋಗುಗಳಿಗೆ ಸ್ಪಂದಿಸಬೇಕು. ಇದರಲ್ಲಿ ಯಾವುದೇ ರಾಜಕೀಯ ಬೆರೆಸಬಾರದು. ಮುಕ್ತವಾಗಿ ಕಾರ್ಯನಿರ್ವಹಿಸಬೇಕು. ಸೇವೆಯ ವಿಚಾರ ಬಂದಾಗ ಎಲ್ಲರೂ ಕೈ ಜೋಡಿಸಬೇಕು. ಆಗ ಮಾತ್ರ ಸಂಘಗಳು ಮುನ್ನಡೆಯಲು ಸಾಧ್ಯ ಎಂದು ಅವರು ಸಲಹೆ ನೀಡಿದರು. ಸಮಾಜದ ಹಿರಿಯರಾದ ಪಂಪ್ ಸೆಟ್ ಮಹದೇವ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ. ರಮೇಶ್ ಹಾಲಿನ ಡೇರಿ ಅಧ್ಯಕ್ಷ ಕೆ. ಗೋಪಾಲ್, ಚಂದ್ರಣ್ಣ ಸೇರಿದಂತೆ ಕುರುಬ ಸಮಾಜದ ಮುಖಂಡರು ಹಾಜರಿದ್ದರು.
ನೂತನ ಪದಾಧಿಕಾರಿಗಳು: ಸಂಗೊಳ್ಳಿ ರಾಯಣ್ಣ ಸ್ನೇಹ ಬಳಗಕ್ಕೆ ಕೆ. ಆರ್. ಶ್ರೀನಿವಾಸ್ (ಅಧ್ಯಕ್ಷ), ಎಂ. ಎನ್. ಅನಿಲ್ ಕುಮಾರ್ (ಗೌರವಾಧ್ಯಕ್ಷ), ಕೆ. ಎಂ. ನಾರಾಯಣ, ಚಂದ್ರ, ಕೀರ್ತಿ (ಉಪಾಧ್ಯಕ್ಷರು) ಮೋಹನ್ (ಕಾರ್ಯದರ್ಶಿ), ದೀಪು ( ಸಹಕಾರ್ಯದರ್ಶಿ), ತಮ್ಮಯ್ಯ (ಖಜಾಂಚಿ), ಮಂಜುನಾಥ್ (ಸಂಘಟನಾ ಕಾರ್ಯದರ್ಶಿ), ಚಿಕ್ಕಣ್ಣ (ಸಂಚಾಲಕ), ಕೆ.ಎನ್. ಗಿರೀಶ್ (ಸಹಸಂಚಾಲಕ), ಕೆ. ಭಾಸ್ಕರ್ (ಕಾನೂನು ಸಲಹೆಗಾರರು), ಕೆ. ಎಂ. ಲಕ್ಷ್ಮಣ್, ಚಂದ್ರ, ಕೆ. ಆರ್. ನವೀನ್, (ಸಲಹೆಗಾರರು), ರಮೇಶ್, ಮಂಜುನಾಥ್, ನಾಗರಾಜು, ರಾಮಮೂರ್ತಿ, ಪುಟ್ಟರಾಜು ( ನಿರ್ದೇಶಕರು) ಆಯ್ಕೆಯಾದರು.