

ಹುಬ್ಬಳ್ಳಿ: ಕಮ್ಮಾರ ಜನಾಂಗವು ಸರ್ಕಾರದ ಸವಲತ್ತುಗಳಿಂದ ವಂಚಿತವಾಗಿದೆ, ತಮ್ಮ ಮಕ್ಕಳಿಗೆ ಸಮರ್ಪಕ ಶಿಕ್ಷಣ ಕೊಡಿಸಲು ಆಗದಷ್ಟು ಬಡವರಿದ್ದಾರೆ ಎಂದು ಕರ್ನಾಟಕ ರಾಜ್ಯ ಕಮ್ಮಾರ ಸಂಗಳ ಒಕ್ಕೂಟ ಹುಬ್ಬಳ್ಳಿ ಘಟಕದ ಗೌರವಾಧ್ಯಕ್ಷ ಜೆ.ಎಸ್. ಕಮ್ಮಾರ ಅಭಿಪ್ರಾಯಪಟ್ಟರು.
ಇಲ್ಲಿಯ ಹಳೇಹುಬ್ಬಳ್ಳಿ ಕಮ್ಮಾರ ಸಾಲ ದುರ್ಗಾಪರಮೇಶ್ವರಿ ದೇವಾಲಯ ಬಳಿ ವಿಶ್ವಕರ್ಮ ಉಪಜಾತಿ ಕಮ್ಮಾರ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಶಿಬಿರದಲ್ಲಿ ಅವರು ಮಾತನಾಡಿದರು.
ಕಮ್ಮಾರ ಜನಾಂಗದವರು ಕಡು ಬಡತನದಲ್ಲೇ ವೃತ್ತಿ ಮುಂದುವರಿಸಿಕೊಂಡು ಹೊರಟಿದ್ದಾರೆ. ಜೀವನ ನಿರ್ವಹಣೆಗೂ ಪರದಾಡುತ್ತಿದ್ದಾರೆ ಎಂದರು.
ಬ್ಯಾಹಟ್ಟಿಯ ಕುಬೇರಪ್ಪ ಕಮ್ಮಾರ, ಗ್ರಾಪಂ ಸದಸ್ಯೆ ಗಿರಿಜವ್ವ ಕಮ್ಮಾರ ಮಾತನಾಡಿ, ಸರ್ಕಾರವು ಕಮ್ಮಾರರಿಗೆ ಒಳಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಮೈಸೂರು ವಿವಿ ಸಂಶೋಧಕ ಡಾ. ಮಹಾದೇವ, ಡಾ. ಕೃಷ್ಣಮೂರ್ತಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಂಜಣ್ಣ ಕಮ್ಮಾರ, ಬೆಂಗಳೂರಿನ ಸಂದ ಅಧ್ಯಕ್ಷ ಟಿ. ನಾಗರಾಜು ಮಾತನಾಡಿದರು.
ನಿಂಗಪ್ಪ ಕಮ್ಮಾರ ಸ್ವಾಗತಿಸಿದರು. ದೇವೆಂದ್ರಪ್ಪ ಕಂಬಾಳೆ ಪ್ರಾಸ್ತಾವಿಕ ಮಾತನಾಡಿದರು. ರಮೇಶ ವಂದಿಸಿದರು.