

ಮಂಡ್ಯ: ತಾಲೂಕಿನ ಕಮ್ಮನಾಯ್ಕನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷೆಯಾಗಿ ಮಮತಾ ಟಿ.ಕೆ.ಸಿದ್ದರಾಜು, ಉಪಾಧ್ಯಕ್ಷೆಯಾಗಿ ಪವಿತ್ರಾ ಕೆ.ಮಹೇಶ್ ಅವಿರೋಧವಾಗಿ ಆಯ್ಕೆಯಾದರು.
ಜಿದ್ದಾಜಿದ್ದಿನಿಂದ ಕೂಡಿದ ಡೇರಿ ಚುನಾವಣೆಯಲ್ಲಿ 8 ನಿರ್ದೇಶಕ ಸ್ಥಾನದ ಪೈಕಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಕೂಟದಿಂದ 7 ಸ್ಥಾನಗಳಲ್ಲಿ ಮಮತಾ, ಪವಿತ್ರಾ, ರಾಧಿಕಾ, ಮಂಜುಳಾ, ಭಾರತಿ, ಮೀನಾ, ರಶ್ಮಿ ಆಯ್ಕೆಯಾಗಿದ್ದರು. ಒಂದು ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತೆ ಆಯ್ಕೆಯಾಗಿದ್ದರು. ಡೇರಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮೈತ್ರಿಕೂಟದ ಮಮತಾ ಅಧ್ಯಕ್ಷೆ ಸ್ಥಾನಕ್ಕೆ ಹಾಗೂ ಪವಿತ್ರಾ ಉಪಾಧ್ಯಕ್ಷೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಮತ್ಯಾರೂ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಅವಿರೋಧವಾಗಿ ಆಯ್ಕೆಯನ್ನು ಘೋಷಿಸಿದರು.
ಮುಖಂಡರಾದ ನಿಂಗೇಗೌಡ, ಶಂಕರೇಗೌಡ, ಟಿ.ಡಿ.ದೇವೇಗೌಡ, ಮಹೇಶ್, ಜಯಪ್ರಕಾಶ್, ಪ್ರದೀಪ್, ರಾಜು, ನಾಗೇಶ್, ದೇಶಿ ಗೌಡ ಇತರರಿದ್ದರು. ಇದೇ ವೇಳೆ ನೂತನ ವರಿಷ್ಠರನ್ನು ಅಭಿನಂದಿಸಲಾಯಿತು.