ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ

Kampli chilli formars appel
ಮೆಣಸಿನಕಾಯಿಗೆ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ನೇತೃತ್ವದಲ್ಲಿ ಕಂಪ್ಲಿ ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಭರಮರೆಡ್ಡಿ, ಕೆ.ರಮೇಶ, ಡಿ.ಮುರಾರಿ, ಶ್ರೀನಿವಾಸ, ಲಿಂಗಪ್ಪ ಇತರರಿದ್ದರು.
Published on

ಕಂಪ್ಲಿ: ಮೆಣಸಿನಕಾಯಿಗೆ ಸರ್ಕಾರ ಬೆಂಬಲ ಘೋಷಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸೋಮವಾರ ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಮೆಣಸಿನಕಾಯಿ ದರ ಕುಸಿತದಿಂದಾಗಿ ರೈತರು ಹತಾಶರಾಗಿದ್ದಾರೆ. ತಾಲೂಕಿನಲ್ಲಿ 9 ಸಾವಿರ ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿರುವ ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಎಕರೆಗೆ 2 ಲಕ್ಷ ರೂಪಾಯಿ ಖರ್ಚು ಆಗಿದ್ದು, ದರ ಕುಸಿತದಿಂದ ಎಕರೆಗೆ 80ರಿಂದ 1ಲಕ್ಷ ರೂ. ನಷ್ಟವಾಗುತ್ತಿದೆ. ಕೆಂಪು ಮೆಣಸಿನಕಾಯಿ ಬೆಳೆದ ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕಿದೆ. ಕ್ವಿಂಟಾಲ್ ಮೆಣಸಿನಕಾಯಿಗೆ 35 ಸಾವಿರ ರೂ. ಬೆಂಬಲ ಬೆಲೆ ಘೋಷಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಉಪಾಧ್ಯಕ್ಷ ಭರಮರೆಡ್ಡಿ, ತಾಲೂಕು ಕಾರ್ಯಾಧ್ಯಕ್ಷರಾದ ಕೆ.ರಮೇಶ, ಡಿ.ಮುರಾರಿ, ರೈತರಾದ ಶ್ರೀನಿವಾಸ್, ಕೊಟ್ಟಾಲ್ ಲಿಂಗಪ್ಪ, ಜಗದೀಶ, ಶ್ರೀಕಾಂತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net