ಖಾಸಗಿಗೂ ಕಮ್ಮಿಯಿಲ್ಲ ಸರ್ಕಾರಿ ಶಾಲೆ

22Muragundi1
Published on

ಮುರಗುಂಡಿ: ಗ್ರಾಮದ ಸರ್ಕಾರಿ ಪ್ರೌಢಶಾಲೆ ನಗರ ಮಟ್ಟದ ಖಾಸಗಿ ಶಾಲೆಗಳಿಗಿಂತಲೂ ಅತ್ಯುತ್ತಮ ಕಾರ್ಯನಿರ್ವಹಿಸುತ್ತಿದೆ ಎಂದು ಅಥಣಿ ಪುರಸಭೆ ಸದಸ್ಯ ರಾವಸಾಹೇಬ ಐಹೊಳೆ ಹೇಳಿದರು.

ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು. ಯುವ ಧುರೀಣ ರಮೇಶ ಸಿಂದಗಿ ಮಾತನಾಡಿ, ಶಿಕ್ಷಕರು, ಪಾಲಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರ ಹೊಂದಾಣಿಕೆಯಿಂದ ಶಾಲೆ ಸಮಗ್ರ ಅಭಿವೃದ್ಧಿಯಾಗಿದೆ ಎಂದರು.

ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಯಶಾಲಿಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಥಣಿ ಪುರಸಭೆ ಸದಸ್ಯೆ ಮೃಣಾಲಿನಿ ದೇಶಪಾಂಡೆ, ಮುಖ್ಯಶಿಕ್ಷಕ ರವೀಂದ್ರ ಕಡಾಕಡಿ ಮಾತನಾಡಿದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಕಬುಲ್ ನದಾಫ್ , ಗ್ರಾಪಂ ಅಧ್ಯಕ್ಷೆ ಅಶ್ವಿನಿ ಕಾಟಕರ, ಉಪಾಧ್ಯಕ್ಷೆ ಶೋಭಾ ಪಾಟೀಲ, ಪಿಡಿಒ ಸಂತೋಷ ನಿಡೋಣಿ, ಧುರೀಣರಾದ ರವೀಂದ್ರ ಶೇಷುಗೋಳ, ಕುಮಾರಗೌಡ ಪಾಟೀಲ, ತವನಪ್ಪ ಮಹೇಷವಾಡಗಿ, ನಿಂಗಪ್ಪ ಪರಮಾನಟ್ಟಿ, ಎಂ.ಎಸ್.ಮಳಮಳಸಿ, ಸಂಜೀವ ಸನದಿ, ಮುತ್ತಪ್ಪ ಮಗಾಡಿ, ರಮೇಶ ಕುಸನಾಳೆ, ನಿವೃತ್ತ ಮುಖ್ಯಶಿಕ್ಷಕ ಕೆ.ಎ.ಶಿರಗಾಂವಕರ, ಸುರೇಶ ವಾಘಮೋಡೆ, ಕುಮಾರ ಗಸ್ತಿ, ಎಸ್.ಬಿ.ಸಜ್ಜನ ಇತರರು ಇದ್ದರು. ಜಿ.ಎಂ.ಅತ್ತಾರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net