ಬಿಇಎಲ್ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಕಾಮೇಶ್ ಕಸನ

bel
Published on

ಬೆಂಗಳೂರು : ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)ನ ನವರತ್ನ ರಕ್ಷಣಾ ಪಿಎಸ್‌ಯು ವಿಭಾಗದ ನಿರ್ದೇಶಕರಾಗಿ ಕಾಮೇಶ್ ಕಸನ ನೇಮಕಗೊಂಡಿದ್ದು, ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಮೊದಲು ಬಿಇಎಲ್‌ನ ಮಿಲಿಟರಿ ಸಂವಹನ ಕಾರ್ಯತಂತ್ರದ ವ್ಯವಹಾರ ಘಟಕದ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು. 1993 ರಲ್ಲಿ ಬಿಇಎಲ್‌ಗೆ ಸೇರಿದ ಕಾಮೇಶ್ ರಕ್ಷಣಾ ಎಲೆಕ್ಟ್ರಾನಿಕ್ಸ್‌ನಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ವಿಶಿಷ್ಟ ಅನುಭವವನ್ನು ಹೊಂದಿದ್ದಾರೆ. ತಮ್ಮ ವೃತ್ತಿಜೀವನದುದ್ದಕ್ಕೂ ಬಿಇಎಲ್‌ನ ವಿವಿಧ ವಿಭಾಗಗಳ ಬೆಳವಣಿಗೆಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ವಿಶೇಷವಾಗಿ ಭಾರತೀಯ ಸೇನೆಯಲ್ಲಿ ಉಪಯೋಗಿಸುವ ಹಲವು ತಂತ್ರಜ್ಞಾನಗಳ ಆವಿಷ್ಕಾರದಲ್ಲಿ ಸೇವೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net