ಕಂಬಿಬಾಣೆ ಗ್ರಾ.ಪಂ. ಸಾಮಾನ್ಯ ಸಭೆ

kambibane
Published on

ಸುಂಟಿಕೊಪ್ಪ:

ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಾಫಿ ತೋಟಗಳಲ್ಲಿ ಇರುವ ಹೊರ ರಾಜ್ಯದ ಕಾರ್ಮಿಕರ ಬಗ್ಗೆ ಸಂಪೂರ್ಣ ಮಾಹಿತಿಯುಳ್ಳ ದಾಖಲಾತಿಗಳನ್ನು ಎಲ್ಲಾ ತೋಟಗಳ ಮಾಲೀಕರು ಗ್ರಾಮ ಪಂಚಾಯಿತಿಗೆ ಸಲ್ಲಿಸುವ ಮೂಲಕ ಸಹಕಾರ ನೀಡಬೇಕೆಂಬ ನಿರ್ಣಯವನ್ನು ಕಂಬಿಬಾಣೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಯಿತು.

ಗ್ರಾಪಂ ಅಧ್ಯಕ್ಷೆ ರಾಧ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಗ್ರಾಮ ಸಭೆಯಲ್ಲಿ ಈ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.

ಪಂಚಾಯಿತಿ ವ್ಯಾಪ್ತಿಯ ಹಲವೆಡೆಗಳಲ್ಲಿ ಇರುವ ಹೊರರಾಜ್ಯಗಳ ಕಾರ್ಮಿಕರು ಕೆಲವೊಂದು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳಿವೆ. ಸಂಬAಧಿಸಿದ ಇಲಾಖೆಗಳ ಮುಖ್ಯಸ್ಥರು ಸ್ಥಳೀಯ ಗ್ರಾಮ ಪಂಚಾಯಿತಿಗಳನ್ನೇ ಎಲ್ಲಕ್ಕೂ ಹೊಣೆ ಮಾಡುತ್ತಿರುವ ಕಾರಣ ಅನ್ಯ ಭಾಷಿಗ ಕಾರ್ಮಿಕರನ್ನು ಹೊಂದಿರುವ ಮಾಲೀಕರು ಕೂಡಲೇ ಅವರ ಬಗ್ಗೆ ಮಾಹಿತಿ ನೀಡುವ ಮೂಲಕ ಸಹಕಾರ ನೀಡಬೇಕೆಂದು ಪಂಚಾಯಿತಿ ಆಡಳಿತ ಮಂಡಳಿ ಆಗ್ರಹಿಸಿತು.

ಕಂಬಿಬಾಣೆಯಿAದ ಭೂತನಕಾಡು ಸಂಪರ್ಕ ರಸ್ತೆ ಕಳೆದ ಹಲವು ವರ್ಷಗಳಿಂದ ಅಭಿವೃದ್ದಿಯಾಗದೇ ಸಂಪೂರ್ಣವಾಗಿ ಹಾಳಾಗಿದ್ದು ಸಂಚಾರಕ್ಕೆ ಸಾರ್ವಜನಿಕರು ಬವಣೆ ಪಡುತ್ತಿದ್ದು ರಸ್ತೆಯನ್ನು ಅಭಿವೃದ್ದಿ ಪಡಿಸುವ ಬಗ್ಗೆ ಸಾರ್ವಜನಿಕರಿಂದ ಅಹವಾಲುಗಳು ಬರುತ್ತಿವೆ. ಆದರೆ ಪಂಚಾಯಿತಿ ಅನುದಾನದಿಂದ ರಸ್ತೆಯ ಅಭಿವೃದ್ದಿ ಅಸಾಧ್ಯವಾಗಿರುವ ಕಾರಣ ಸಂಬAಧಿತ ಇಲಾಖೆಯಿಂದ ರಸ್ತೆ ಅಭಿವೃದ್ದಿಗೆ ಪೂರಕವಾದ ಅನುದಾನ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳನ್ನು ಕೋರುವ ಬಗ್ಗೆ ಸಭೆ ಒತ್ತಾಯಿಸಿತು.

ಸಭೆಯಲ್ಲಿ ಪಂಚಾಯಿತಿಗೆ ಬಂದ ಸಾರ್ವಜನಿಕರ ಅರ್ಜಿಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಎನ್.ಶಂಕರ್, ಸದಸ್ಯರಾದ ಕೆ.ಬಿ.ಕೃಷ್ಣ, ಎಂ.ಎನ್.ಅಶ್ವಿನಿ, ಮಧು ನಾಗಪ್ಪ ಹಾಗೂ ಅಭಿವೃದ್ದಿ ಅಧಿಕಾರಿ ಮಧುಮತಿ ನಂದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net