ತುಂಬಿ ಹರಿಯುತ್ತಿದೆ ಕಂಬಾರಗಣವಿ ಹಳ್ಳ; ಗಮನ ಹರಿಸುವರೇ ಸಚಿವ ಸಂತೋಷ ಲಾಡ್?

20 Dwd 5
Published on

ಧಾರವಾಡ: ಅಳ್ನಾವರ ತಾಲೂಕಿನ ಕಂಬಾರಗಣವಿ ಹಳ್ಳ ಸಣ್ಣ ಮಳೆಯಾದರೂ ತುಂಬಿ ಹರಿಯುತ್ತದೆ. ರಸ್ತೆ ಮೇಲೆ ಹರಿಯುವ ನೀರಿನ ರಭಸ ಕಡಿಮೆಯಾಗುವವರೆಗೆ ಸಂಚಾರ ಸ್ಥಗಿತಗೊಳ್ಳುತ್ತದೆ.
ಕಂಬಾರಗಣವಿ ಗ್ರಾಮ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಬೇಸಿಗೆಯಲ್ಲಿ ಈ ಹಳ್ಳದ ಹೂಳು ತೆಗೆದಿರುವುದಾಗಿ ಅಽಕಾರಿಗಳ ದಾಖಲೆಗಳಲ್ಲಿದೆ. ಆದರೂ ಕೊಂಚ ಮಳೆಗೂ ನೀರು ರಸ್ತೆ ಮೇಲೆ ಹರಿಯುತ್ತದೆ. ಶಾಲೆಯ ಮಕ್ಕಳು ಮನೆಗೆ ಮರಳುವಾಗ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕು.
ಬೇರೆ ರಾಜ್ಯಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ಧಾವಿಸುವ ಸಚಿವ ಸಂತೋಷ ಲಾಡ್ ಅವರು ತಮ್ಮ ಕ್ಷೇತ್ರದ ಗ್ರಾಮದ ಜನತೆಯ ಸಂಕಷ್ಟಕ್ಕೆ ಸ್ಪಂದಿಸದಿರುವುದು ಖೇದಕರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net