ಕೋಣಗಳ ಹಿಂದೆ ಓಡುವ ಬಾಲಕ!

kambala
Published on

ಕಾರ್ಕಳ: ಒಂಬತ್ತು ವರ್ಷದ ಬಾಲಕನೊಬ್ಬ ಕಂಬಳ ಕೋಣಗಳ ಹಿಂದೆ ಓಡುವ ಮೂಲಕ ಗಮನ ಸೆಳೆದಿದ್ದಾನೆ.

ಮಂಜಲ್‌ಬೆಟ್ಟು ಸುಹಾಸ್ ಪ್ರಭು - ಅಮೃತಾ ದಂಪತಿ ಪುತ್ರ ಅತಿಶ್ ಪ್ರಭು ಕಂಬಳ ಓಟಗಾರನಾಗಬೇಕೆಂಬ ಕನಸು ಕಾಣುತ್ತಿದ್ದಾನೆ. ಕಾರ್ಕಳ ಎಸ್‌ವಿಟಿ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿರುವ ಅತಿಶ್‌ಗೆ ತುಳುನಾಡ ಜನಪದ ಕ್ರೀಡೆ ಕಂಬಳದಲ್ಲಿ ಬಹಳ ಆಸಕ್ತಿ. ಕಂಬಳದ ಪ್ರಸಿದ್ಧ ಓಟಗಾರ ಶ್ರೀನಿವಾಸ್ ಗೌಡ ಅವರಂತೆ ತಾನು ಓಟಗಾರನಾಗಬೇಕು ಎಂಬುದು ಗುರಿ. ಅದಕ್ಕಾಗಿ ವಿವಿಧ ಸ್ತರಗಳಲ್ಲಿ ಅಭ್ಯಾಸ ನಡೆಸುತ್ತಿದ್ದಾನೆ. ಮಗನ ಆಸಕ್ತಿಗೆ ಹೆತ್ತವರ ಬೆಂಬಲವೂ ಇದೆ.

ಮನೆಯಲ್ಲಿ ಕಂಬಳ ಕೋಣಗಳಿದ್ದು, ಅವುಗಳನ್ನು ತೊಳೆಯಲು ಹೋಗುವಾಗ- ವಾಪಸ್ ತರುವಾಗ ಬಾಲ ಹಿಡಿದು ಓಡುತ್ತಾನೆ. ಕಂಬಳದ ಓಟಗಾರರು ಧರಿಸುವ ಸಮವಸ್ತ್ರದಂತಹ ಬಟ್ಟೆ ತಾನೂ ಧರಿಸಿ ಖುಷಿಪಡುತ್ತಾನೆ. ಬಾಲಕನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net