

ಮಂಗಳೂರು : ಮಹಿಷ ಮರ್ದಿನಿ ಕಂಬಳ ಸಮಿತಿ ಹೊಕ್ಕಾಡಿಗೋಳಿ ಇದರ ವತಿಯಿಂದ 2024ರ ಮಾರ್ಚ್ 16ರಂದು
ನಡೆಯಲಿರುವ ಇತಿಹಾಸ ಪ್ರಸಿದ್ಧ ಶ್ರೀವೀರ ವಿಕ್ರಮ ಜೋಡುಕರೆ ಬಯಲು ಕಂಬಳದ ಕರೆ ಮುಹೂರ್ತವನ್ನು
ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಕೃಷ್ಣ ಪ್ರಸಾದ್ ಅಸ್ರಣ್ಣ ಅವರು ನೆರವೇರಿಸಿದರು.
ಹೊಕ್ಕಾಡಿಗೋಳಿ ಕಂಬಳ ಸಮಿತಿಯ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಗೌರವ ಅಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು,
ಪ್ರಧಾನ ಕಾರ್ಯದರ್ಶಿ ಪ್ರಭಾಕರ.ಎಚ್.ಹುಲಿಮೇರು, ಕಾಯದರ್ಶಿ ಪುಷ್ಪರಾಜ ಜೈನ್,
ಪೂಂಜ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರತ್ನಕುಮಾರ್ ಚೌಟ, ಹಿರಿಯ ಕಂಬಳ ಸಂಘಟಕ ಜಗತ್ಪಾಲ್ ಶೆಟ್ಟಿ ಉಮನೊಟ್ಟು, ಕುಟ್ಟಿ ಶೆಟ್ಟಿ ಹಕ್ಕೇರಿ, ಆನಂದ್ ಶೆಟ್ಟಿ ಹಕ್ಕೇರಿ, ಸುರೇಶ್ ಕೆ ಶೆಟ್ಟಿ ಹಕ್ಕೇರಿ, ಸಚಿನ್ ಶೆಟ್ಟಿ ಹಕ್ಕೇರಿ,ಜಯಂತ್ ಶೆಟ್ಟಿ ಹಕ್ಕೇರಿ, ಸಂತೋಷ್ ಶೆಟ್ಟಿ ಕೊನೆರೊಟ್ಟು, ರಾಜೇಶ್ ಶೆಟ್ಟಿ ಸಿದ್ದಕಟ್ಟೆ , ಸ್ಥಳ ದಾನಿಗಳಾದ ರಾಜು ಶೆಟ್ಟಿ ಹೊಕ್ಕಾಡಿಗೋಳಿ,ಸುಧೀರ್ ಶೆಟ್ಟಿ ಹೊಕ್ಕಾಡಿಗೋಳಿ, ಕೊಲ್ಯ ಬಾಬು ಶೆಟ್ಟಿ, ಪ್ರವೀಣ್ ಕುಲಾಲ್ , ಹರೀಶ್ ಶೆಟ್ಟಿ ಹೊಕಾ ಡಿಗೋಳಿ, ಮಹಾವೀರ ಚೌಟ ಉಗ್ರೋಡಿ, ಸುಂದರ ಪೂಜಾರಿ ನಿಡ್ಯಾಲ, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಶೆಟ್ಟಿ ಬದ್ಯಾರು, ಸದಸ್ಯರಾದ ಯೋಗೀಶ್ ಆಚಾರ್ಯ, ಲಿಂಗಪ್ಪ ಪೂಜಾರಿ, ಮಾಜಿ ಅಧ್ಯಕ್ಷ ಮಹಾಬಲ ಶೆಟ್ಟಿ. ಆರಂಬೋಡಿ ಗ್ರಾಪಂ ಸದಸ್ಯರಾದ: ಸತೀಶ್ ಪಿ.ಮಠ, ಸುರೇಂದ್ರ ಶೆಟ್ಟಿ ಅಜ್ಜಾಡಿ, ಸಂಗಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ಕುಲಾಲ್, ಸದಸ್ಯ ಉದಯ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.