

ಕೊರಟಗೆರೆ:
ಕೊರಟಗೆರೆ: ಕಂಬದಹಳ್ಳಿ ಕೆರೆ ಏರಿ ಗುರುವಾರ ಬೆಳ್ಳಂಬೆಳಗ್ಗೆ ಒಡೆದಿದ್ದು, ಅಪಾರ ಪ್ರಮಾಣದ ನೀರು ನುಗ್ಗಿ ಹೊಲ, ಗದ್ದೆಗಳು ಜಲಾವೃತಗೊಂಡಿವೆ. ಭೋರ್ಗರೆದು ಹರಿಯುತ್ತಿರುವ ನೀರು ನೋಡಲು ಜನ ಗುಂಪುಗುಂಪಾಗಿ ಬಂದಿದ್ದು, ಸುಮಾರು 25 ಎಕರೆ ವಿಸ್ತೀರ್ಣದ ಕೆರೆ ಸಂಪೂರ್ಣ ಖಾಲಿಯಾಗಿದೆ.
ಸ್ಥಳಕ್ಕೆ ಕೊರಟಗೆರೆ ತಹಸೀಲ್ದಾರ್ ನಹೀದಾ ಜಮ್ ಜಮ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ಮತ್ತು ಬಿಜೆಪಿ ಮುಖಂಡ ಬಿ.ಎಚ್.ಅನಿಲ್ ಕುಮಾರ್ ಸ್ಥಳ ಪರಿಶೀಲಿಸಿದರು. ನೀರು ನುಗ್ಗಿದ್ದ ಹೊಲ, ಗದ್ದೆಗಳ ರೈತರಿಗೆ ಸಾಂತ್ವನ ಹೇಳಿದರು. ಜಂಪೇನಹಳ್ಳಿ, ಅಗ್ರಹಾರ ಕೆರೆ ಏರಿಗಳಲ್ಲೂ ರಂಧ್ರಗಳು ಕಾಣಿಸಿಕೊಂಡಿದ್ದು, ಎರಡೂ ಕೆರೆಗಳು ಅಪಾಯ ಮಟ್ಟದಲ್ಲಿವೆ.