

ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆ ನಗರದ ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ಅನಂತ ಚತುರ್ದಶಿ ಅಂಗವಾಗಿ ಭಾನುವಾರ ಶ್ರೀ ಕಾಮಾಕ್ಷಿ ಲಕ್ಷ್ಮಿ ನಾರಾಯಣಿ ದೇವಿಗೆ ವೇದಮೂರ್ತಿ ಪೃಥ್ವಿರಾಜ್ ಭಟ್ ಇತರ ಅರ್ಚಕರ ನೇತೃತ್ವದಲ್ಲಿ ವಿಶೇಷ ಅಲಂಕಾರ ಪೂಜೆ ಸಲ್ಲಿಸಲಾಯಿತು.
ಮಧ್ಯಾಹ್ನ ದೇವಸ್ಥಾನದ ವತಿಯಿಂದ ಹಮ್ಮಿಕೊಂಡ ಮಹಾ ಅನ್ನ ಸಂತರ್ಪಣೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸಿದರು.
ಪರೀಕ್ಷಿತ್ ಭಟ್, ಪ್ರಮೋದ್ ಕಾಮತ್, ಸದಾನಂದ ಕಾಮತ, ಶ್ರೀಕಾಂತ ಮಹಾಲೆ, ಮಹೇಶ್ ಮಾನಗೆ, ಸಮಾಜ ಸೇವಕ ರವಿ ನಾಯಕ, ವಿಠ್ಠಲ್ ಭಟ್, ಪುಷ್ಪಕ ರಾಯ್ಕರ, ಸಂಗು ಪಟ್ಟಣಶೆಟ್ಟಿ, ನೀಶಾ ಭಟ್, ಕೃಷ್ಣಕಾಂತ ಪ್ರಭು ಮೊದಲಾದವರು ಪಾಲ್ಗೊಂಡಿದ್ದರು.