ಸಾರಿಗೆ ಸಚಿವರಿಗೆ ಶಾಸಕ ಕಾಮತ್ ಮನವಿ

sssssssssss
Published on



ಮಂಗಳೂರು : ಆಟೋ ರಿಕ್ಷಾಗಳ ಬಾಡಿಗೆ ಮೀಟರ್‌ನ ಮುದ್ರೆಯನ್ನು ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿಗಳು ಮಂಗಳೂರು ಆರ್.ಟಿ.ಒ ಕಚೇರಿಯಲ್ಲೇ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವಂತೆ ಕೋರಿ ಶಾಸಕ ವೇದವ್ಯಾಸ ಕಾಮತ್ ಅವರು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಸದ್ಯ ಈ ಪ್ರಕ್ರಿಯೆ ನಗರದ ಹೊರ ವಲಯದ ಕುಲಶೇಖರದಲ್ಲಿ ನಡೆಯುತ್ತಿದೆ. ಇದರಿಂದ ಆಟೋ ಚಾಲಕರಿಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಆಟೋ ಚಾಲಕ-ಮಾಲಕರ ಸಂಘಗಳ ಒಕ್ಕೂಟದವರು ಮನವಿ ನೀಡಿದ್ದಾರೆ ಎಂದು ಶಾಸಕರು ಈ ಸಂದರ್ಭ ಸಚಿವರಿಗೆ ತಿಳಿಸಿದರು. ವಾರದ 2 ದಿನ ಮಂಗಳೂರಿನ ಆರ್‌ಟಿಒ ಕಚೇರಿಯಲ್ಲೇ ತೂಕ ಮತ್ತು ಮಾಪನ ಇಲಾಖೆಗೆ ಸ್ಥಳಾವಕಾಶ ಒದಗಿಸಿಕೊಟ್ಟು ನಗರದ ಆಟೋ ಚಾಲಕರ ಬೇಡಿಕೆಗೆ ಸ್ಪಂದಿಸುವಂತೆ ಶಾಸಕರು ವಿನಂತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net