

ಕಮತಗಿ: ಸ್ಥಳೀಯ ರಾಘವೇಂದ್ರ ಸ್ವಾಮಿಗಳ ಮಠದ ವತಿಯಿಂದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಅಂಗವಾಗಿ ಪ್ರಲ್ಹಾದ ರಾಜರ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆ ಶುಕ್ರವಾರ ಪಟ್ಟಣದಲ್ಲಿ ಸಂಭ್ರಮದಿಂದ ಜರುಗಿತು.
ರಾಘವೇಂದ್ರ ಸ್ವಾಮಿಗಳ ಮಠದಲ್ಲಿನ ಬೃಂದಾವನಕ್ಕೆ ಬೆಳಗ್ಗೆ ಪಂಚಾಮೃತ ಅಷ್ಟೋತ್ರ ಮತ್ತು ಅಭಿಷೇಕದ ನಂತರ ಹೂಗಳಿಂದ ಅಲಂಕಾರ ಪೂಜೆ ನಡೆಯಿತು.
ಶ್ರೀಮಠದ ಅಧ್ಯಕ್ಷ ಸುಭಾಸ ದೇಶಪಾಂಡೆ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಗೂ ಸಮಾಜದ ಗುರು-ಹಿರಿಯರು ಇದ್ದರು.