ಕಮತಗಿ ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಕೊಠಡಿ ಉದ್ಘಾಟನೆ

Kamatagi PAP President and Vice President's room inaugurated
ಕಮತಗಿ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ನವೀಕರಣಗೊಂಡ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಕೊಠಡಿಗಳನ್ನು ಶಾಸಕ ಎಚ್. ವೈ.ಮೇಟಿ ಉದ್ಘಾಟಿಸಿದರು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಐ. ಕಡ್ಲಿಮಟ್ಟಿ, ಪಪಂ ಅಧ್ಯಕ್ಷ ರಮೇಶ ಜಮಖಂಡಿ ಇತರರಿದ್ದರು.
Published on

ಕಮತಗಿ: ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ನವೀಕರಣಗೊಂಡ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಕೊಠಡಿಗಳನ್ನು ಶಾಸಕ ಎಚ್. ವೈ. ಮೇಟಿ ಸೋಮವಾರ ಉದ್ಘಾಟಿಸಿದರು.

ನಂತರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನವೀಕರಣಗೊಂಡ ಕೊಠಡಿಯಲ್ಲಿ ನಡೆದ ಲಕ್ಷ್ಮೀದೇವಿಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಶುಭಕೋರಿದರು.

ಇದೇ ವೇಳೆ ಶಾಸಕ ಮೇಟಿ ಅವರನ್ನು ಸನ್ಮಾನಿಸಲಾಯಿತು.

ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ ಜಮಖಂಡಿ, ಉಪಾಧ್ಯಕ್ಷೆ ನೇತ್ರಾವತಿ ದೇವಿಪ್ರಸಾದ ನಿಂಬಲಗುಂದಿ, ಪಪಂ ಸದಸ್ಯರಾದ ದೇವಿಪ್ರಸಾದ ನಿಂಬಲಗುಂದಿ, ಗುರಲಿಂಗಪ್ಪ ಪಾಟೀಲ, ಬಸವರಾಜ ಕುಂಬಳಾವತಿ, ಚಂದು ಕುರಿ, ಲಕ್ಷ್ಮಣ ಮಾದರ, ಪ್ರಭು ಶಿನ್ನೂರ, ಮುಖಂಡರಾದ ಹುಚ್ಚಪ್ಪ ಸಿಂಹಾಸನ, ಎಸ್. ಎಸ್. ಮಂಕಣಿ, ಪಪಂ ಮುಖ್ಯಾಧಿಕಾರಿ ಎ್. ಎನ್. ಹುಲ್ಲಿಕೇರಿ, ಪಪಂ ನಾಮನಿರ್ದೇಶಿತ ಹಾಗೂ ಆಶ್ರಯ ಕಮಿಟಿ ಸದಸ್ಯರು, ಪಪಂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net