

ಅರಸೀಕೆರೆ(ಗ್ರಾಮಾಂತರ): ಕಾಮಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ತುಂಬಾಪುರ ಗ್ರಾಮದ ರೇಖಾ ವಾಗೀಶ್ ಆರಾಧ್ಯ ಅವಿರೋಧವಾಗಿ ಆಯ್ಕೆಯಾದರು.
14 ಜನ ಸದಸ್ಯರ ಗ್ರಾಪಂನಲ್ಲಿ ಲಕ್ಷ್ಮಮ್ಮ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ರೇಖಾ ವಾಗೀಶ್ ಆರಾಧ್ಯ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ, ತಾಪಂ ಇಒ ಸತೀಶ್ ಘೊಷಣೆ ಮಾಡಿದರು.
ಉಪಾಧ್ಯಕ್ಷೆ ಕೋಮಲಾ, ಸದಸ್ಯರಾದ ನವೀನ್ ತುಂಬಾಪುರ, ಶಿವಣ್ಣ, ಪಡುವನಳ್ಳಿ ರಾಜಶೇಖರ್, ಮಂಜುನಾಥ್, ಮಾಜಿ ಜಿಪಂ ಸದಸ್ಯ ಮಾಡಾಳು ಸ್ವಾಮಿ, ಪಿಡಿಒ ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ರಾಂಪುರ ಸುರೇಶ್ ಮುಂತಾದವರಿದ್ದರು.