

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕಾಮನಕಟ್ಟಿಯ ಪ್ಯಾಟಿ ಶ್ರೀ ವೀರಭದ್ರೇಶ್ವರ ದೇವರ 70ನೇ ವರ್ಷದ ಜಾತ್ರಾ ಮಹೋತ್ಸವವನ್ನು ಡಿ. 14 ಮತ್ತು 15ರಂದು ಆಯೋಜಿಸಲಾಗಿದೆ. 13ರಂದು ರಾತ್ರಿ 8 ಗಂಟೆಗೆ ಶ್ರೀ ದೇವರ ಮೂರ್ತಿ ಹಾಗೂ ಗುಗ್ಗಳ ಕೊಡಗಳನ್ನು ಸಕಲ ವಾದ್ಯಗಳೊಂದಿಗೆ ತರಲಾಗುವುದು. 14ರಂದು ಬೆಳಗ್ಗೆ 7 ಗಂಟೆಗೆ ದೇವರ ಗುಗ್ಗಳ ಮಹೋತ್ಸವವು ದೇವಸ್ಥಾನದಿಂದ ಹೊರಟು ರವಿವಾರಪೇಟ, ಮಟ್ಟಿ ಪರಪ್ಪನ ಕೂಟ, ಹೊಸ ಓಣಿ ಮಾರ್ಗವಾಗಿ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಳ್ಳುವುದು. ಸಂಜೆ 4 ಗಂಟೆಗೆ ದೇವರ ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಹೊರಟು ಗಾಂಽ ಚೌಕ್, ಹೆಬ್ಬಳ್ಳಿ ಅಗಸಿ, ಮಟ್ಟಿ ಪರಪ್ಪನ ಕೂಟ, ಹೊಸ ಓಣಿ, ಹೊಸ ಯಲ್ಲಾಪುರ ಮಾರ್ಗವಾಗಿ ಮರಳಿ ದೇವಸ್ಥಾನ ತಲುಪುವುದು. 15ರಂದು ಬೆಳಗ್ಗೆ 5 ಗಂಟೆಗೆ ಮಹಾ ರುದ್ರಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಪ್ರಸಾದ, ಸಂಜೆ 5 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವರ ಮಹಾರಥೋತ್ಸವ ಜರುಗುವುದು ಎಂದು ದೇವಸ್ಥಾನ ಟ್ರಸ್ಟ್ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.