ಕೆಟ್ಟು ನಿಂತ ಬಸ್ ಪ್ರಯಾಣಿಕರ ಪರದಾಟ

5 KML 02
ಕಲಬುರಗಿಯಿAದ ಚಿಂಚೋಳಿ ತಾಲೂಕಿನ ಹುಳಗೇರಿಗೆ ಹೊರಟಿದ್ದ ಸಾರಿಗೆ ಬಸ್ ಮಹಾಗಾಂವ ಕ್ರಾಸ್‌ನಲ್ಲಿ ಕೆಟ್ಟು ನಿಂತಿರುವುದು.
Published on

ಕಮಲಾಪುರ: ಮಹಾಗಾಂವ್ ಕ್ರಾಸ್‌ನಲ್ಲಿ ಕಲಬುರಗಿಯಿಂದ ಚಿಂಚೋಳಿ ತಾಲೂಕಿನ ಹುಳಗೇರಿ ಗ್ರಾಮಕ್ಕೆ ಹೊರಟಿದ್ದ ಸಾರಿಗೆ ಬಸ್ ಗುರುವಾರ ಮಧ್ಯಾಹ್ನ ಕೆಟ್ಟಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಸರ್ಕಲ್ ಬಳಿಯ ಸೇತುವೆ ಮೇಲೆ ನೀರು ಹರಿದು ರಾಜ್ಯ ಹೆದ್ದಾರಿಯಲ್ಲಿ ತಗ್ಗು ಬಿದ್ದಿದ್ದರಿಂದ ಬಸ್‌ನ ಎಕ್ಸಲ್​ ಮುರಿದಿದೆ. ಈ ಮಾರ್ಗದಲ್ಲಿ ಭಾರಿ ವಾಹನಗಳು, ಬಸ್, ಟೆಂಪೋ, ಕಾರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವುದರಿಂದ ಹೆದ್ದಾರಿ ದಿನೇದಿನೆ ಹಾಳಾಗುತ್ತಿದೆ. ಸೇತುವೆ ನಿರ್ಮಿಸುವಂತೆ ಬೇಡಿಕೆಗೆ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ. ಈಗಲಾದರೂ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net