

ಕಮಲಶಿಲೆ: ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭಾನುವಾರ ಸಾಯಂಕಾಲ ಕುಬ್ಜಾ ನದಿ ಉಕ್ಕಿ ಹರಿದು ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರಿ ದೇವಸ್ಥಾನದ ಒಳಪ್ರಾಂಗಣಕ್ಕೆ ನೀರು ಪ್ರವೇಶಿಸಿದೆ. ಗರ್ಭಗುಡಿಯ ಪ್ರವೇಶಕ್ಕೆ ಇನ್ನೂ ಕೆಲವೇ ಅಡಿಗಳ ನೀರು ಬಾಕಿ ಇತ್ತು. ಪ್ರತಿ ವರ್ಷ ಮಳೆಗಾಲದಲ್ಲಿ ಕುಬ್ಜಾ ನದಿ ಉಕ್ಕಿ ಹರಿದು, ಗರ್ಭಗುಡಿ ಪ್ರವೇಶಿಸುವುದು ವಿಶೇಷ.