ಕಮಲಶಿಲೆ ಮೇಳ ನಾಳೆ ತಿರುಗಾಟ ಆರಂಭ

kamalashile
Published on

ಕಮಲಶಿಲೆ: ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಳದ ವತಿಯಿಂದ ನಡೆಸಲ್ಪಡುವ ಶ್ರೀ ಕ್ಷೇತ್ರ ಕಮಲಶಿಲೆ ದಶಾವತಾರ ಯಕ್ಷಗಾನ ಎರಡು ಮೇಳಗಳು ನುರಿತ ಕಲಾವಿದರೊಂದಿಗೆ ಸಜ್ಜುಗೊಂಡು ಡಿ.7ರಂದು ಶ್ರೀ ಕ್ಷೇತ್ರದಲ್ಲಿ ಪ್ರಥಮ ದೇವರ ಸೇವೆಯಾಟದೊಂದಿಗೆ 2020-21ನೇ ಸಾಲಿನ ತಿರುಗಾಟ ಆರಂಭಗೊಳ್ಳಲಿದೆ.

ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ 11.25ಕ್ಕೆ ಶ್ರೀ ಗಣಹೋಮ, ಮಹಾಗಣಪತಿ ಪೂಜೆ, ರಾತ್ರಿ 7ರಿಂದ 12.30ರ ತನಕ ಪ್ರಥಮ ದೇವರ ಸೇವೆಯಾಟದೊಂದಿಗೆ ಈ ಸಾಲಿನ ತಿರುಗಾಟಕ್ಕೆ ಚಾಲನೆ ನೀಡಲಾಗುತ್ತದೆ.

ಕೋವಿಡ್-19ರ ನಿಯಮಗಳನ್ನು ಪಾಲಿಸಿಕೊಂಡು, ಪ್ರತಿದಿನ ರಾತ್ರಿ 7ರಿಂದ 12 ಗಂಟೆ ತನಕ ಯಕ್ಷಗಾನ ಪ್ರದರ್ಶನ ಸೀಮಿತಗೊಳಿಸಲಾಗಿದೆ. ಭಕ್ತರು ಎರಡು ಮೇಳಗಳ ಹೆಚ್ಚಿನ ಆಟಗಳನ್ನು ಈಗಾಗಲೇ ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಸಂಘ ಸಂಸ್ಥೆಗಳು, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಈ ಸಾಲಿನ ಅವಧಿಯಲ್ಲಿ ಇನ್ನೂ ಕೆಲವು ದಿನಗಳಲ್ಲಿ ಆಟ ಆಡಿಸಲು ಅವಕಾಶವಿದೆ. ಪೌರಣಿಕ ಪ್ರಸಂಗಗಳಿಗೆ ಆದ್ಯತೆ ನೀಡಲಾಗುವುದು. ಆಟ ಆಡಿಸಲಿಚ್ಛಿಸುವವರು ದೇವಳದ ಕಚೇರಿ ಅಥಾವ ಮೇಳದ ಸಂಚಾಲಕರ ಮೂಲಕ ದಿನಾಂಕ ನಿಗದಿಪಡಿಸಬಹುದಾಗಿದೆ ಎಂದು ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net