ಡಿ.7ರಿಂದ ಕಮಲಶಿಲೆ ಮೇಳ ತಿರುಗಾಟ ಆರಂಭ

kamalashile new
Published on

ಕಮಲಶಿಲೆ: ಶ್ರೀಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಳದ ವತಿಯಿಂದ ನಡೆಸಲ್ಪಡುವ ಶ್ರೀಕ್ಷೇತ್ರ ಕಮಲಶಿಲೆ ದಶಾವತಾರ ಯಕ್ಷಗಾನ ಎರಡು ಮೇಳಗಳು ನುರಿತ ಕಲಾವಿದರೊಂದಿಗೆ ಆಕರ್ಷಕ ವೇಷ ಭೂಷಣಗಳೊಂದಿಗೆ ಸಕಲ ಸಿದ್ಧತೆಯೊಂದಿಗೆ ಸಜ್ಜುಗೊಂಡು ಡಿ.7ರಂದು ಶ್ರೀಕ್ಷೇತ್ರದಲ್ಲಿ ಪ್ರಥಮ ದೇವರ ಸೇವೆಯಾಟದೊಂದಿಗೆ 2020-21ನೇ ಸಾಲಿನ ತಿರುಗಾಟ ಆರಂಭಗೊಳ್ಳಲಿದೆ.

ಶ್ರೀಕ್ಷೇತ್ರದಲ್ಲಿ ಡಿ.7ರಂದು ಬೆಳಗ್ಗೆ 11.25ಕ್ಕೆ ಗಣಹೋಮ, ಮಹಾಗಣಪತಿ ಪೂಜೆ, ರಾತ್ರಿ 8.30ರಿಂದ ಪ್ರಥಮ ದೇವರ ಸೇವೆಯಾಟದೊಂದಿಗೆ ತಿರುಗಾಟಕ್ಕೆ ಚಾಲನೆ ನೀಡಲಾಗುತ್ತದೆ.

ಭಕ್ತರು ಎರಡು ಮೇಳಗಳ ಹೆಚ್ಚಿನ ಆಟಗಳನ್ನು ಈಗಾಗಲೇ ಮುಂಗಡವಾಗಿ ಕಾಯ್ದಿರಿಸಿದ್ದು, ಸಂಘಸಂಸ್ಥೆಗಳು, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಈ ಸಾಲಿನ ಅವಧಿಯಲ್ಲಿ ಇನ್ನೂ ಕೆಲವು ದಿನಗಳಲ್ಲಿ ಆಟ ಆಡಿಸಲು ಅವಕಾಶವಿದೆ. ಪೌರಾಣಿಕ ಪ್ರಸಂಗಗಳಿಗೆ ಹೆಚ್ಚಿನ ಆದ್ಯತೆಯೊಂದಿಗೆ ಕಾಲಮಿತಿ ಪ್ರದರ್ಶನಕ್ಕೂ ಅವಕಾಶವಿದೆ, ಆಟ ಆಡಿಸಲಿಚ್ಛಿಸುವವರು ದೇವಳದ ಕಚೇರಿ ಅಥವಾ ಮೇಳದ ಸಂಚಾಲಕರ ಮೂಲಕ ದಿನಾಂಕವನ್ನು ನಿಗದಿ ಪಡಿಸಿ ಕಾಯ್ದಿರಿಸಬಹುದಾಗಿದೆ ಎಂದು ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net