ಕಮಲಾಪುರದಲ್ಲಿ ತಿರಂಗಾ ಯಾತ್ರೆ ಸಂಭ್ರಮ

31 MANJU 01
Published on

ಹೊಸಪೇಟೆ: ಭಾರತೀಯ ಸೈನಿಕರ ಅಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆಯ ನಿಮಿತ್ತ ತಾಲೂಕಿನ ಕಮಲಾಪುರದಲ್ಲಿ ತಿರಂಗಾ ಯಾತ್ರೆ ಶನಿವಾರ ನಡೆಯಿತು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಆರಂಭಗೊAಡ ತಿರಂಗಾ ಯಾತ್ರೆಯೂ ಹಂಪಿ ರಸ್ತೆ, ಕೃಷ್ಣದೇವರಾಯ ವೃತ್ತ, ಚೌಡಿಕೇರಿ, ಮನ್ಮಥಕೇರಿ, ತಿಮ್ಮನಾಥ ಕೇರಿ, ಹಿರೇಕೆರಿ, ಗಾರೆಭಾವಿ ಆಂಜನೇಯ ದೇಗುಲ, ವಾಲ್ಮೀಕಿ ವೃತ್ತದ, ಗೋನಾಳಕೆರಿ ಮಾರ್ಗವಾಗಿ ಊರಮ್ಮ ಬಯಲಿನ ವರೆಗೆ ಜರುಗಿತು. ತಿರಂಗಾ ಯಾತ್ರದ ಉದ್ದಕ್ಕೂ ಭಾರತೀಯ ಸೈನಿಕರ ಕಾರ್ಯಕ್ಕೆ ಜೈಘೋಷ ಕೂಗಲಾಯಿತು. ದೇಶಭಕ್ತಿಯ ಹಾಡುಗಳನ್ನು ಹಾಡುತ್ತಾ, ಸಾರ್ವಜನಿಕರು ಕೈಯಲ್ಲಿ ಭಾರತದ ಧ್ವಜವನ್ನು ಹಿಡಿದು ಮೆರವಣಿಗೆಯುದ್ದಕ್ಕೂ ಭಾಗವಹಿಸಿದರು. ಸುಮಾರು 4 ಕಿ.ಮೀ ದೂರದ ವರೆಗೆ ನಡೆದ ತಿರಂಗಾ ಧ್ವಜಯಾತ್ರೆಯಲ್ಲಿ, ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಕನ್ನಡಪರ ಸಂಘಟನೆಗಳು ಸೇರಿದಂತೆ ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಜತೆಗೆ ಮಹಿಳೆಯರು, ವಿದ್ಯಾರ್ಥಿಗಳು ಪಾಲ್ಗೊಂಡು ದೇಶಭಕ್ತಿಗೆ ಸಾಕ್ಷಿಯಾಗುವ ಮೂಲಕ ಗಮನ ಸೆಳೆದರು.

ಮುಖಂಡ ಅಯ್ಯಾಳಿ ತಿಮ್ಮಪ್ಪ ಮಾತನಾಡಿ, ಭಾರತೀಯ ಸೈನಿಕರು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಮೇಲೆ ದಾಳಿ ನಡೆಸುವ ಮೂಲಕ ಭಯೋತ್ಪಾದನೆಗೆ ಕಡಿವಾಣ ಹಾಕಿದ್ದಾರೆ. ಭಾರತ ದೇಶ ಸೌಮ್ಯ ಮತ್ತು ಪ್ರೀತಿಯ ದೇಶ. ಎಲ್ಲರನ್ನೂ ಗೌರವಿಸಿ, ಪ್ರೀತಿಸುತ್ತೇವೆ. ಆದರೆ ನಮ್ಮ ದೇಶಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ ಎಂಬ ಸಂದೇಶವನ್ನು ಸಾರಿದ್ದೇವೆ. ಇಂತಹ ದೇಶಭಕ್ತಿಯ ಕಾರ್ಯ ಪ್ರತಿಯೊಬ್ಬರಲ್ಲಿ ಬರಬೇಕಿದೆ ಎಂದರು.

ಪ್ರಮುಖರಾದ ಖಾಜಾಹುಸೇನ್, ಸಂಜೀವರೆಡ್ಡಿ, ಕಿಚಡಿಕೊಟ್ರೇಶ್, ಮಣಿಕಂಠ, ಬಡಿಗೆರ್ ಪ್ರಕಾಶ್, ನಿಂಗಪಗಪ, ಶಂಕರ್ ಮೇಟಿ, ಈರಣ್ಣಪೂಜಾರ, ಮಾಬಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net